ಹೆಬ್ಬಳ್ಳಿ ಜಿ.ಪಂ.ಚುನಾವಣೆ: 6 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಜಯಭೇರಿ.....

ಬುಧವಾರ, 23 ನವೆಂಬರ್ 2016 (10:45 IST)
ಹೆಬ್ಬಳ್ಳಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇಂದು ನಡೆದಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚನ್ನಬಸಪ್ಪ ಮಟ್ಟಿ ಗೆಲವು ಸಾಧಿಸಿದ್ದಾರೆ.
 
ಬಿಜೆಪಿ ಅಭ್ಯರ್ಥಿ ಮಲ್ಲಮ್ಮ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಚನ್ನಬಸಪ್ಪ ಮಟ್ಟಿ 6 ಮತಗಳ ಅಂತರದಲ್ಲಿ ಜಯಭೇರಿಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಮಲ್ಲಮ್ಮ ಪತಿ ಯೊಗೇಶಗೌಡ ಅವರ ಹತ್ಯೆ ನಂತರ ಹುಬ್ಬಳ್ಳಿ ಜಿಲ್ಲಾ ಪಂಚಾಯತ್ ಕ್ಷೇತ್ರ ತೆರವಾಗಿತ್ತು. 
 
ಈ ಹಿಂದೆ ಹೆಬ್ಬಳ್ಳಿ ಜಿಲ್ಲಾ ಪಂಚಾಯತ್ ಸದಸ್ಯೆರಾಗಿ ಆಯ್ಕೆಯಾಗಿದ್ದ ಯೋಗೇಶಗೌಡ ಅವರ ಹತ್ಯೆಯಿಂದ ತೆರವಾದ ಈ ಸ್ಥಾನಕ್ಕೆ ಬಿಜೆಪಿಯಿಂದ ಯೋಗೇಶಗೌಡ ಅವರ ಪತ್ನಿ ಮಲ್ಲಮ್ಮ ಅವರು ಸ್ಪರ್ಧಿಸಿದ್ದು, ಕಾಂಗ್ರೆಸ್ ಪಕ್ಷದಿಂದ ಚನ್ನಬಸಪ್ಪ ಮಟ್ಟಿ ಹಾಗೂ ಜೆಡಿಎಸ್ ಪಕ್ಷದಿಂದ ರುದ್ರಪ್ಪ ಅವರು ಸ್ಪರ್ಧಿಸಿದ್ದರು.
 
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಮರು ಮತದಾನ ಪ್ರಕ್ರಿಯೆ ನಡೆದರು ಕಾಂಗ್ರೆಸ್ ಅಭ್ಯರ್ಥಿ ಚನ್ನಬಸಪ್ಪ ಮಟ್ಟಿ ಅವರು ವಿಜಯದ ನಗೆ ಬೀರಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ