ಹನೂರಿನಲ್ಲಿ HDK ಅಬ್ಬರದ ರೋಡ್​ ಶೋ

ಶನಿವಾರ, 6 ಮೇ 2023 (19:20 IST)
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮಾಜಿ ಸಿಎಂ H.D. ಕುಮಾರಸ್ವಾಮಿ ರಣಕಹಳೆ ಮೊಳಗಿಸಿದ್ದಾರೆ.. ಹನೂರು ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ಪರ ಕುಮಾರಸ್ವಾಮಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ.. ರೋಡ್‌ ಶೋನಲ್ಲಿ ಕುಮಾರಸ್ವಾಮಿಗೆ ಡಾ.ಬಿ.ಆರ್​​ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಸಾಥ್​ ನೀಡಿದ್ದಾರೆ.. ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಪ್ರಾರಂಭವಾಗಿ ಖಾಸಗಿ ಬಸ್‌ ನಿಲ್ದಾಣದವರೆಗೆ ರೋಡ್ ಶೋ ನಡೆಸಿದ್ದಾರೆ.. ಇನ್ನು HDK ಆಗಮನದಿಂದ ಜನ ಸಾಗರ ಹರಿದು ಬಂದಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ