ಫೆಬ್ರವರಿಯಲ್ಲಿ ನೀವು ಭೇಟಿ ನೀಡಬಹುದಾದ ಕರ್ನಾಟಕದ ಟಾಪ್ 3 ಪ್ರವಾಸೀ ತಾಣಗಳು

Krishnaveni K

ಶನಿವಾರ, 25 ಜನವರಿ 2025 (11:51 IST)
ಬೆಂಗಳೂರು: ಫೆಬ್ರವರಿ ತಿಂಗಳು ಬಂತೆಂದರೆ ಅತ್ತ ಚಳಿಯೂ ಅಲ್ಲ ಇತ್ತ ಸೆಖೆಯೂ ಅಲ್ಲದ ವಾತಾವರಣ. ಈ ಸಂದರ್ಭದಲ್ಲಿ ನೀವು ಭೇಟಿ ನೀಡಬಹುದಾದ ಕರ್ನಾಟಕ ಟಾಪ್ 3 ಪ್ರವಾಸೀ ತಾಣಗಳು ಯಾವುವು ನೋಡಿ.

ನಂದಿ ಬೆಟ್ಟ: ಕರ್ನಾಟಕದ ರಾಜಧಾನಿ ಬೆಂಗಳೂರಿಗರಿಗೆ ಸನಿಹದ ಒಂದು ದಿನದ ಪಿಕ್ ನಿಕ್ ಸ್ಪಾಟ್ ಎಂದರೆ ನಂದಿ ಬೆಟ್ಟ. ಫೆಬ್ರವರಿ ತಿಂಗಳಲ್ಲಿ ಹದವಾಗಿ ಬಿಸಿಲು ಮತ್ತು ಮಂಜು ಮುಸುಕಿದ ವಾತಾವರಣವಿರುತ್ತದೆ. ಈ ಸಂದರ್ಭದಲ್ಲಿ ಒಂದು ದಿನ ಫ್ಯಾಮಿಲಿ ಜೊತೆ ಹೋಗಿ ರಿಲ್ಯಾಕ್ಸ್ ಆಗಬಹುದು ಎಂದರೆ ನಂದಿ ಬೆಟ್ಟ ಬೆಸ್ಟ್ ತಾಣವಾಗಿರುತ್ತದೆ.

ಚಿಕ್ಕಮಗಳೂರು: ಫ್ಯಾಮಿಲಿ ಸಮೇತ ಎರಡು ದಿನಗಳ ಕಾಲ ಸುತ್ತಾಡಿಕೊಂಡು ಬರೋಣ ಎಂದರೆ ಚಿಕ್ಕಮಗಳೂರು ಬೆಸ್ಟ್. ಬೆಟ್ಟ ಗುಡ್ಡಗಳ ನಡುವೆ ಕಾಲ ಕಳೆಯಬಹುದು. ಜೊತೆಗೆ ಮಂಜು ಮುಸುಕಿದ ವಾತಾವರಣವಿರುವಾಗ ಚಿಕ್ಕಮಗಳೂರು ಸ್ವರ್ಗಕ್ಕೆ ಸಮನವಾಗಿರುತ್ತದೆ.

ಕೂರ್ಗ್ ಅಥವಾ ಕೊಡಗು: ಕರ್ನಾಟಕದ ಕಾಶ್ಮೀರ ಎಂದೇ ಕರೆಯಲ್ಪಡುವ ಕೊಡಗಿಗೆ ಚಳಿಗಾಲದಲ್ಲಿ ಭೇಟಿ ನೀಡಲು ಬೆಸ್ಟ್ ಟೈಂ. ಎಷ್ಟೋ ನವ ಜೋಡಿಗಳಿಗೆ ರೊಮ್ಯಾಂಟಿಕ್ ಆಗಿ ಕಾಲ ಕಳೆಯಲು ಇದು ಬೆಸ್ಟ್ ತಾಣ. ಕೊಡಗಿನಲ್ಲಿ ಸಾಕಷ್ಟು ರೆಸಾರ್ಟ್, ಹೋಂ ಸ್ಟೇಗಳೂ ಇದ್ದು, ವೀಕೆಂಡ್ ನಲ್ಲಿ ಪ್ರಕೃತಿ ಮಧ್ಯೆ ಕಾಲ ಕಳೆದುಬರಬಹುದು. ಸೆಲ್ಫೀ ತೆಗೆದುಕೊಳ್ಳುವವರಿಗೆ ಪರ್ಸನಲ್ ವ್ಲಾಗ್ ಮಾಡುವವರಿಗೆ, ರೀಲ್ಸ್ ಮಾಡುವವರಿಗೆ ಇದು ಹೇಳಿ ಮಾಡಿಸಿದ ತಾಣ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ