ಯಡಿಯೂರಪ್ಪರ ಡೈರಿ ರಿಲೀಸ್ ಮಾಡುವೆ ಎಂದೋರಾರು?

ಶುಕ್ರವಾರ, 12 ಏಪ್ರಿಲ್ 2019 (20:05 IST)
ಕೆ.ಎಸ್.ಈಶ್ವರಪ್ಪರ ಮಾಜಿ ಪಿಎ ವಿನಯ್  ನಿಂದ ಪೊಲೀಸರಿಗೆ ಮನವಿ ಮಾಡಲಾಗಿದೆ.

ಬಿ.ಎಸ್.ಯಡಿಯೂರಪ್ಪನವರ ಡೈರಿ ವಿಚಾರದಲ್ಲಿ ಭದ್ರತೆ ನೀಡುವಂತೆ ಅಮೃತ ಹಳ್ಳಿ ಪೊಲೀಸರಿಗೆ ಮನವಿಯನ್ನು ವಿನಯ್ ಮಾಡಿದ್ದಾರೆ.

ನನ್ನ ಬಳಿ ಬಿ.ಎಸ್. ಯಡಿಯೂರಪ್ಪನ ಡೈರಿ ಇದೆ. ಅದನ್ನ ಬಿಡುಗಡೆ ಮಾಡುತ್ತೇನೆ. ಹೀಗಾಗಿ ನನಗೆ ಭದ್ರತೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ.

ಈ ಹಿಂದೆ ಸಿಸಿಬಿ ಪೊಲೀಸರು ಡೈರಿ ಒಪ್ಪಿಸುವಂತೆ ನೋಟಿಸ್ ನೀಡಿದ್ರು. ಇದರ ಬೆನ್ನಲ್ಲೇ ಡೈರಿ ಬಿಡುಗಡೆ ಮಾಡೋಕೆ ಸಿದ್ಧತೆಯನ್ನು ವಿನಯ್ ನಡೆಸಿದ್ದಾನೆ.

ಈ ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿ.ಎಸ್.ಯಡಿಯೂರಪ್ಪರ ಪಿಎ ಸಂತೋಷ್ ನಿಂದ ಅಪಹರಣಕ್ಕೂ ಸಹ ಒಳಗಾಗಿದ್ದ ವಿನಯ್ . ಸದ್ಯ ಸಿಸಿಬಿಯಲ್ಲಿ ಕೇಸ್ ವಿಚಾರಣೆಯಲ್ಲಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ