ಇಮ್ರಾನ್‌ಖಾನ್‌ರನ್ನು ಹಾಡಿ ಹೊಗಳಿ ಪೇಚಿಗೆ ಸಿಲುಕಿದ್ಯಾರು?

ಶುಕ್ರವಾರ, 12 ಏಪ್ರಿಲ್ 2019 (12:25 IST)
2019 ರ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ದೋಸ್ತಿ ಅಭ್ಯರ್ಥಿಯ ಸಮಾವೇಶವೊಂದರಲ್ಲಿ ಶಾಸಕರೊಬ್ಬರು ಇಮ್ರನ್ ಖಾನ್ ರನ್ನು ಹಾಡಿ ಹೊಗಳಿ ಪೇಚಿಗೆ ಸಿಲುಕಿದ್ದಾರೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ದೋಸ್ತಿ ಪಕ್ಷಗಳ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರ ಶೃಂಗೇರಿ ಶಾಸಕ ಟಿ.ಡಿ‌. ರಾಜೇಗೌಡ ಭರ್ಜರಿ ಪ್ರಚಾರ ನಡೆಸಿದ್ರು.

ಇಂದು ಎನ್.ಆರ್.ಪುರದ ಮೆಣಸೂರಿನಲ್ಲಿ ಸಮಾವೇಶ ನಡೆಸಿದ್ದ ಟಿ.ಡಿ.ರಾಜೇಗೌಡ, ಪಾಕ್ ಪ್ರಧಾನಿ ಇಮ್ರಾನ್‌ ಖಾನ್‌ರನ್ನು ಹಾಡಿ ಹೊಗಳಿ ಪೇಚಿಗೆ ಸಿಲುಕಿದ್ದಾರೆ.

ಇಮ್ರಾನ್‌ಖಾನ್ ಪಾಕಿಸ್ತಾನದ ಪ್ರಧಾನಮಂತ್ರಿ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಹೆಸರಿನಲ್ಲಿ ಮೋದಿ ದೇಶದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ನಮ್ಮ ಯುದ್ಧ ವಿಮಾನಗಳು ಪಾಕಿಸ್ತಾನದ ಗಡಿಗೆ ಹೋಗಿತ್ತು. ಅವರ ಯುದ್ಧ ವಿಮಾನಗಳು ಸೇರಿದಂತೆ ಅಲ್ಲಿನ ಸೈನ್ಯವನ್ನು ಹೊಡೆದುರುಳಿಸಿದ್ದು ನಿಜ.

ಆದಾದ ಬಳಿಕ ನಮ್ಮ ದೇಶದ ವಿಂಗ್ ಕಮಾಂಡರ್ ಅಭಿನಂದನ್‌ರನ್ನು ವಶದಲ್ಲಿಟ್ಟುಕೊಂಡಿದ್ದು ನಿಜ. ವಿಂಗ್ ಕಮಾಂಡರ್ ಅಭಿನಂದನ್ ಬಂಧನವಾದ ಬಳಿಕ ಮೋದಿ ಪಾಕಿಸ್ಥಾನಕ್ಕೆ ಬೆದರಿಕೆ ಹಾಕಿದ್ರು. ಆದ್ರೆ ಪಾಕಿಸ್ಥಾನದ ಪ್ರಧಾನಿ ಇಮ್ರಾನ್‌ಖಾನ್ ಸಜ್ಜನ ವ್ಯಕ್ತಿ. ಅವರು ನಮ್ಮ ದೇಶವನ್ನು ನೋಡಿದ್ದಾರೆ.

ನಮ್ಮ ಸೈನಿಕರನ್ನು ನೋಡಿ ಇಮ್ರಾನ್‌ಖಾನ್, ವಿಂಗ್ ಕಮಾಂಡರ್ ಅಭಿನಂದನ್‌ರನ್ನು ಬಿಡುಗಡೆಗೊಳಿಸಿದ್ರು.
ಅದು‌ ಮೋದಿ ಅವರ ಬೆದರಿಕೆಗೆ ಅಲ್ಲಾ ಎಂದು ಸಮಾವೇಶದಲ್ಲಿ ಭಾಷಣ ಮಾಡಿದ ಟಿ.ಡಿ.ರಾಜೇಗೌಡ ಹೇಳಿಕೆ ವೈರಲ್ ಆಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ