ದೇವೇಗೌಡ್ರ ಮನೆದೇವ್ರ ಮೇಲೆ ಐಟಿ ರೇಡ್

ಶುಕ್ರವಾರ, 12 ಏಪ್ರಿಲ್ 2019 (19:03 IST)
ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಲದೇವರ ಮೇಲೆ ಐಟಿ ರೇಡ್ ನಡೆದಿದೆ.

ಹಾಸನದಲ್ಲೂ ನಿಲ್ಲದ ಐಟಿ ದಾಳಿ ತನಿಖೆ ಮುಂದುವರಿಸಿದೆ. ಹರದನಹಲ್ಳಿ ಈಶ್ವರ ದೇಗುಲದ ಅರ್ಚಕರ ಮನೆ ಮೇಲೆ ಐಟಿ ದಾಳಿ ನಡೆಸಲಾಗಿದೆ. ಅರ್ಚಕ ಪ್ರಕಾಶ್ ಭಟ್ ಎಂಬುವರ ಮನೆಯಲ್ಲಿ ಪರಿಶೀಲನೆ ನಡೆಸಲಾಗಿದೆ.

ದೇವಾಲಯ ಪ್ರಾಂಗಣವನ್ನೂ ಅಧಿಕಾರಿಗಳ ತಂಡವು ಶೋಧಿಸಿದೆ.

ಹರದನಹಳ್ಳಿ ಈಶ್ವರ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬದ ಕುಲದೇವರು. ದೇಗುಲ ಹಾಗೂ ಅರ್ಚಕರ ಮನೆಯಲ್ಲಿ ಹಣ ಇಟ್ಟಿರಬಹುದು ಎಂದು ಶೋಧ ನಡೆದಿದೆ. ಆದರೆ ಆದ್ರೆ ಏನೂ ಸಿಗದೇ ಬರಿಗೈಲಿ ಐಟಿ ತಂಡ ವಾಪಸ್ ಮರಳಿದೆ ಎನ್ನಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ