ಕೊಪ್ಪಳ ಲೋಕಸಭೆ ಚುನಾವಣೆ 2019 ನೇರ ಪ್ರಸಾರ | Koppal loksabha election 2019 Live updates

[$--lok#2019#state#karnataka--$]

ಕೊಪ್ಪಳ ಲೋಕಸಭೆ ಮತಕ್ಷೇತ್ರದಲ್ಲಿ 2019 ರ ಈ ಬಾರಿಯ ಕದನದಲ್ಲಿಯೂ ಕಾಂಗ್ರೆಸ್ – ಬಿಜೆಪಿ ನೇರ ಎದುರಾಳಿಗಳು. 
 
ಹಿಟ್ನಾಳ್ ಮತ್ತು ಕರಡಿ ಕುಟುಂಬಗಳೇ ಇಲ್ಲಿನ ಮೂರು ದಶಕಗಳ ರಾಜಕೀಯ ವೈರಿಗಳ. ಬೇರೆ ಅಭ್ಯರ್ಥಿಗಳಿಗೆ ಆಸ್ಪದವೇ ಇಲ್ಲಿಲ್ಲ. ಈ ಬಾರಿ ಕೊನೆ ಗಳಿಗೆಯಲ್ಲಿ ಟಿಕೆಟ್ ಪಡೆದಿರುವ ಸಂಗಣ್ಣ ಕರಡಿ ಬಿಜೆಪಿಯಿಂದ ಮತ್ತೊಮ್ಮೆ ಸಂಸತ್ ಪ್ರವೇಶಿಸಲು ಸಜ್ಜಾಗಿದ್ದಾರೆ. ಆದರೆ ಕರಡಿ ಕುಣಿತಕ್ಕೆ ಬ್ರೇಕ್ ಹಾಕಲು ಕೈ ಪಡೆಯಿಂದ ರಾಜಶೇಖರ್ ಹಿಟ್ನಾಳ್ ಅಖಾಡಕ್ಕೆ ಧುಮುಕಿದ್ದಾರೆ. 
 
ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಈಗಿನ ಕಾಂಗ್ರೆಸ್ ಅಭ್ಯರ್ಥಿಯ ತಂದೆ ಕೆ.ಬಸವರಾಜ ಹಿಟ್ನಾಳ್ ರನ್ನು ಸಂಗಣ್ಣ ಕರಡಿ ಸೋಲಿಸಿದ್ದರು. ಮತ್ತೆ ಅವರೂ ಸೋತಿದ್ದರು. ಆ ಬಳಿಕ ಬಸವರಾಜ ಹಿಟ್ನಾಳ್ ರ ಹಿರಿಯ ಸಹೋದರ ರಾಘವೇಂದ್ರ ಹಿಟ್ನಾಳ್ ಎಂಎಲ್ ಎ ಎಲೆಕ್ಷನ್ ನಲ್ಲಿ ಒಮ್ಮೆ ಸಂಗಣ್ಣ ಕರಡಿ ಮತ್ತೊಮ್ಮೆ ಕರಡಿ ಪುತ್ರ ಅಮರೇಶ ಕರಡಿಯನ್ನು ಸೋಲಿಸಿದ್ದಾರೆ. ಈಗ ಹಿಟ್ನಾಳ್ ಹಾಗೂ ಕರಡಿ ಪ್ರಾಬಲ್ಯ ಈ ಜಿಲ್ಲೆಯಲ್ಲಿದೆ. 
 
ಕರಡಿಗೆ ಮೋದಿ ಅಲೆ ಅಸ್ತ್ರವಾದರೆ, ಹಿಟ್ನಾಳ್ ಗೆ ಸಿದ್ದರಾಮಯ್ಯ ಹಾಗೂ ಅವರ ಸಮುದಾಯದ ಬೆಂಬಲವಿದೆ. 
 
2014 ರ ಚುನಾವಣೆಯಲ್ಲಿ ಬಿಜೆಪಿಯ ಸಂಗಣ್ಣ ಕರಡಿ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಕೆ.ಬಸವರಾಜ ಹಿಟ್ನಾಳ್ ರನ್ನು 32 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. 
[$--lok#2019#constituency#karnataka--$]
ಒಟ್ಟು 17,36,118 ರಲ್ಲಿ 8,62,466 ಪುರುಷರು, 8,73,539 ಮಹಿಳೆಯರು ಹಾಗೂ 113 ಇತರೆ ಮತದಾರರಿದ್ದಾರೆ. 

ವೆಬ್ದುನಿಯಾವನ್ನು ಓದಿ