ಇತಿಹಾಸದಲ್ಲೇ ಗರಿಷ್ಠ ಬೆಲೆಗೆ ಹರಾಜಾದ ಟೊಮೇಟೊ!
ಮಾರುಕಟ್ಟೆಯಲ್ಲಿ 15ಕೆ.ಜಿ. ಟೊಮೇಟೊ 2000 ರೂ. ಹರಾಜಾಗಿದ್ದು, ಇದು ಮಾರುಕಟ್ಟೆ ಇತಿಹಾಸದಲ್ಲೇ ಅತಿಹೆಚ್ಚು ಬೆಲೆಗೆ ಹರಾಜಾದ ಮನ್ನಣೆಗೆ ಪಾತ್ರವಾಗಿದೆ.
ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಭಾರಿ ಮಳೆ ಬೀಳುತ್ತಿರುವುದರಿಂದ ಅಲ್ಲಿನ ಟೊಮೇಟೊ ತೋಟಗಳು ಸಂಪೂರ್ಣವಾಗಿ ನೆಲಕಚ್ಚಿದೆ ಈ ಹಿನ್ನೆಲೆಯಲ್ಲಿ ಅಲ್ಲಿನ ವ್ಯಾಪಾರಿಗಳು ಟೊಮೇಟೊ ಖರೀದಿಗಾಗಿ ಇಲ್ಲಿನ ಮಾರುಕಟ್ಟೆಗೆ ಆಗಮಿಸುತ್ತಿದ್ದು ಟೊಮೇಟೊಗೆ ಹೆಚ್ಚಿನ ಬೇಡಿಕೆ ಬಂದಿದೆ. ತಾಲೂಕಿನಲ್ಲಿ ತಿಂಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಟೊಮೇಟೊ ಬೆಲೆ ಶೇ. 75 ಸಂಪೂರ್ಣ ನಾಶವಾಗಿದೆ ಇದರಿಂದ ಮಾರುಕಟ್ಟೆಗೆ ಈ ಹಿಂದೆ ಬರುತ್ತಿದ್ದ 15ಕೆ.ಜಿಯ ಒಂದು ಲಕ್ಷ ಬಾಕ್ಸ್ಗಳ ಪೈಕಿ ಈಗ ಕೇವಲ 10 ಸಾವಿರ ಬಾಕ್ಸ್ ಮಾರುಕಟ್ಟೆಗೆ ಬರುತ್ತಿದೆ.
2 ವರ್ಷದಿಂದ ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಇಲ್ಲದ ಕಾರಣ ತೀವ್ರ ನಷ್ಟ ಅನುಭವಿಸಿದ್ದಾರೆ. ಮುಖ್ಯವಾಗಿ ಇಲ್ಲಿನ ರೈತರು ಟೊಮೇಟೊ ಅನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದು, ಹೆಚ್ಚಿನ ಆದಾಯ ಬರಬಹುದೆಂಬ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ. ಆದರೆ, ಇತ್ತೀಚಿಗೆ ಸುರಿಯುತ್ತಿರುವ ಮಳೆಯಿಂದ ಬೆಳೆ ನಾಶವಾಗಿದೆ ಇದರಿಂದ ಟೊಮೇಟೊ ಬೆಲೆ ಹೆಚ್ಚಾದರೂ ರೈತರಿಗೆ ಏನು ಪ್ರಯೋಜನವಾಗುತ್ತಿಲ್ಲ ಎನ್ನುತ್ತಾರೆ ಎಪಿಎಂಸಿ ನಿರ್ದೇಶಕರಾದ ನಗವಾರ ಸತ್ಯಣ್ಣ.