ಬಾಲಿವುಡ್‌ನ ಹೊಸ ಪ್ರಯೋಗ "ಮಿಥ್ಯಾ"

ನಿರ್ಮಾಪಕ: ಅರಿಂದಮ್ ಚೌಧರಿ
IFM

ನಿರ್ದೇಶಕ : ,
ಸಂಗೀತ: ಸಾಗರ್ ದೇಸಾಯಿ
ಸಿನಿಮಾಟೊಗ್ರಾಫಿ : ರಫಿ ಮೆಹ್ಮೂದ್
ತಾರಾಗಣದಲ್ಲಿ :ನಾಸಿರುದ್ದಿನ ಶಹಾ, ನೇಹಾ ಧುಪಿಯಾ, ರಣವೀರ್ ಶೋರೆ, ಹರ್ಷ ಛಾಯಾ ಮುಂತಾದವರು...

ಹಿಂದಿ ಚಿತ್ರ ಜಗತ್ತು ನಿದಾನವಾಗಿ ಬದಲಾಗುತ್ತಿದೆಯೆನೋ ಅನ್ನಿಸುತ್ತಿದೆ. ಸಾಮನ್ಯವಾಗಿ ವಿಚಿತ್ರ ವಿಕ್ಷಿಪ್ತ ಕಥೆಯನ್ನೊಳಗೊಂಡ ಚಿತ್ರಗಳು ಬಾಲಿವುಡ್‌‌‌‌‌‌‌‌‌‌‌‌‌‌‌‌ನಲ್ಲಿ ಇಲ್ಲಿಯವರೆಗೆ ಬಂದಿಲ್ಲ. ಪ್ರೆಂಚ್ ಇಲ್ಲವೇ ಯುರೋಪಿಯನ್ ಚಿತ್ರಗಳನ್ನ ಹೋಲುವ "ಮಿಥ್ಯಾ" ಬಾಲಿವುಡ್ ಚಿತ್ರ ಎಂದರೆ ನಂಬಲಿಕ್ಕೆ ಸಾಧ್ಯವಿಲ್ಲ.

"ಮಿಥ್ಯಾ" ವನ್ನು ಇಂದಿನ ಇಲ್ಲವೇ ಹಳೆ ತಲೆಮಾರಿನ ಯಾವುದೇ ಚಿತ್ರಕ್ಕೂ ಹೋಲಿಸುವುದು ಕಷ್ಟ. ಇದೇ ಸಂಗತಿ ಇದು ಹೊಸ ಪ್ರಯತ್ನ ಎಂದು ಹೇಳಬಹುದು. ಮಿಧ್ಯಾದಂತಹ ಕಥೆಯನ್ನು ಎಲ್ಲರೂ ನೀಡಲು ಸಾಧ್ಯವಿಲ್ಲ. ಇದು ಕೆಲ ವರ್ಗದ ಪ್ರೇಕ್ಷಕರನ್ನು ಮಾತ್ರ ದಟ್ಟವಾಗಿ ಹಿಡಿದಿಡಬಲ್ಲದು. ಆದರೂ ಸಾಮಾನ್ಯ ಪ್ರೇಕ್ಷಕನಿಗೂ ಒಂದು ಬಾರಿ ಇಷ್ಟವಾಗುತ್ತದೆ. ಬದಲಾವಣೆ ಬೇಕು ಎನ್ನುವ ಪ್ರೇಕ್ಷಕ "ಮಿಥ್ಯಾ"ನೋಡಬಹುದು.


ಬಾಲಿವುಡ್ ಜಗತ್ತಿಗೆ ಕನಸುಗಳ ಮೂಟೆಯೊಂದಿಗೆ ಬರುವ ನಾಯಕ ವಿಕೆ (ರಣವೀರ್ ಶೋರೆ) ಎಲ್ಲರಂತೆ ನಾಯಕ ನಟ ಆಗಬೇಕು ಎಂದು ಹಂಬಲಿಸಿದವ. ಬದುಕು ಜಟಕಾ ಭಂಡಿ ವಿಧಿ ಅದರ ಸಾಹೇಬ ಎನ್ನುವಂತೆ ವಿದಿ ವಿಕೆಯನ್ನು ಭೂಗತ ಜಗತ್ತಿಗೆ ಯಾವುದೊ ಒಂದು ಸಮಯದಲ್ಲಿ ತನ್ನತ್ತ ಎಳೆದುಕೊಳ್ಳುತ್ತದೆ ಅಲ್ಲಿಗೆ ಬದುಕು ಅನ್ನುವುದು ನಿಂತ ನೀರಾಗದೇ ಎತ್ತತ್ತಲೋ ಸಾಗುವ ಕಥೆ ವಿಕೆಯ ಮುಂದಿನ ಜೀವನವನ್ನು ನಿರ್ದರಿಸುತ್ತದೆ.
IFM

"ಮಿಥ್ಯಾ"ದ ಕಥೆ ನಿದಾನವಾಗಿ ಪದರು ಪದರುಗಳಲ್ಲಿ ಚಿತ್ರದುದ್ದಕ್ಕೂ ಹರಡಿಕೊಂಡಿದ್ದು ವಿಶೇಷ. ಅತ್ಯಂತ ಸಂಕೀರ್ಣ ಕಥೆಯೊಂದನ್ನು ರಜತ ಕಪೂರ್ ಅದ್ಭುತವಾಗಿ ಪ್ರಸ್ತುತ ಪಡಿಸಿದ್ದಾರೆ. ಕಥೆಯಲ್ಲಿ ಸ್ವಲ್ಪ ಏರು ಪೇರಾದರೂ ಮೈಮೇಲೆ ಬರಬಹುದಾದ ಇಂತಹ ಕಥೆಗಳನ್ನು ರಜತ್ ಕಪೂರ್ ಮಾತ್ರ ನಿರ್ದೇಶಿಸಬಲ್ಲರು.

ಇಡೀ ಚಿತ್ರದಲ್ಲಿ ಮೆಚ್ಚಬೇಕಾದದ್ದು ಚಿತ್ರ ಕಥೆಯನ್ನು ( ಸೌರಭ್ ಶುಕ್ಲಾ, ರಜತ್ ಕಪೂರ್) ಮುಂಬರುವ ಸನ್ನಿವೇಶಗಳು ಏನು ಅನ್ನುವುದು ಪ್ರೇಕ್ಷಕನಿಗೆ ಎಲ್ಲಿಯೂ ಸುಳಿವು ಸಿಗುವುದಿಲ್ಲ. ಹಾವಿನಂತೆ ಸುರುಳಿ ಸುರುಳಿಯಾಗಿ ಸುಳಿಯಂತೆ ಸುತ್ತುವ ಕಥೆ. ಎಲ್ಲಿಯೋ ಪ್ರಾರಂಭವಾಗಿ ಇನ್ನೆಲ್ಲೊ ಅಂತ್ಯವಾಗುತ್ತದೆ ಇದಕ್ಕೆ ಅಲ್ಲವೇ ಜೀವನ ಎಂದು ಹೇಳುವುದು.