Darshan: ಫಾರ್ಮ್‌ಹೌಸ್‌ನಲ್ಲಿ ಗಂಡನ ಜತೆ ವಿಜಯಲಕ್ಷ್ಮಿ ಜಾಲಿರೈಡ್‌

Sampriya

ಶನಿವಾರ, 24 ಮೇ 2025 (18:43 IST)
Photo Credit X
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಈಚೆಗೆ ಜಾಮೀನು ಪಡೆದು ಹೊರಬಂದಿರುವ ನಟ ದರ್ಶನ್ ಅವರು ಸದ್ಯ ಪ್ಯಾಮಿಲಿ ಜತೆ ಸಮಯ ಕಳೆಯುತ್ತಿದ್ದಾರೆ. ಈಚೆಗೆ ಪತ್ನಿಯೊಂದಿಗೆ 22ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.

ಇದರ ಬೆನ್ನಲ್ಲೇ ವಿಜಯಲಕ್ಷ್ಮಿಗೆ ಸಂಕಷ್ಟ ಎದುರಾಗಿತ್ತು.  

ದರ್ಶನ್ ತಮ್ಮ ಮೈಸೂರು ಫಾರಂ ಹೌಸ್​ನಲ್ಲಿ ವಿದೇಶಿ ಬಾತುಕೋಳಿ ಸಾಕಿದ್ದಕ್ಕೆ ಈ ಹಿಂದೆ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ನರಸೀಪುರ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ಬಾರ್‌ ಹೆಡೆಡ್‌ ಗೂಸ್‌ ಎಂಬ ಬಾತುಕೋಳಿಗಳನ್ನು ಸಾಕಿದ್ದ ದರ್ಶನ್ ಅವರ ಮೈಸೂರಿನ ಕೆಂಪಯ್ಯನ ಹುಂಡಿಯಲ್ಲಿರುವ ತೋಟದ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ, ಬಾತುಕೋಳಿಗಳನ್ನು ವಶಕ್ಕೆ ಪಡೆದಿದ್ದರು.

ಇದರ ಬೆನ್ನಲ್ಲೇ ವಿಜಯಲಕ್ಷ್ಮೀ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ನಟ ದರ್ಶನ್ ಅವರು ಎತ್ತಿನಗಾಡಿಯನ್ನು ಓಡಿಸುತ್ತಿರುವುದನ್ನು ಕಾಣಬಹುದು.

ಹಿಂದೆಯಲ್ಲಿ ಕೂತಿದ್ದ ವಿಜಯಲಕ್ಷ್ಮಿ ಅದನ್ನು ವಿಡಿಯೋ ಮಾಡಿ, ಸೂರ್ಯ, ಚಂದ್ರ ಹಾಗೂ ನಮ್ಮ ಸ್ಟಾರ್ ಎಂದು ಬರೆದುಕೊಂಡಿದ್ದಾರೆ.

ಒಟ್ಟಾರೆ ಈ ದರ್ಶನ್ ಅವರು ರೇಣುಕಾಸ್ವಾಮಿ ಪ್ರಕರಣದ ಬಳಿಕ ಫ್ಯಾಮಿಲಿ ಮ್ಯಾನ್ ಆಗಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಜತೆ ಸಮಯ ಕಳೆಯುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ