ಸಂದೇಶ ನೀಡುವ "ಗೌರಿ-ದಿ ಅನ್‌ಬಾರ್ನ್"

IFM
ಥ್ರಿಲ್ಲರ್ ಚಿತ್ರ ಎಂದ ಮೇಲೆ ಒಂದೋ ಆ ಚಿತ್ರ ಪ್ರೇಕ್ಷಕನನ್ನು ಪದೇ ಪದೇ ಬೆಚ್ಚಿಬೀಳಿಸುವಂತಿರಬೇಕು. ಇಲ್ಲ, ಪ್ರೇಕ್ಷಕ ಅಲುಗಾಡದಂತೆ ಹಿಡಿದಿಡುವ ಕಥೆ ಹೊಂದಿರಬೇಕು. ನಿಜ, ಗೌರಿ-ದಿ ಅನಬಾರ್ನ್ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸದ ಸಶಕ್ತ ಕಥಾ ಚಿತ್ರ ಹೊಂದಿದೆ. ಗೌರಿಯಲ್ಲಿ ಒಂದೇರಡು ಸನ್ನಿವೇಶಗಳನ್ನು ಬಿಟ್ಟರೆ ಪ್ರೇಕ್ಷಕ ಎಲ್ಲಿಯೂ ಅಚ್ಚರಿಯ ಸಣ್ಣದೊಂದು ಆಘಾತಕ್ಕೆ ಸಿಲುಕುವುದಿಲ್ಲ. ಬದಲಾಗಿ ನೋಡುಗನಿಗೆ ಒಂದು ಸಂದೇಶ ನೀಡುತ್ತದೆ ಅದು "ಭ್ರೂಣಹತ್ಯೆ ಬೇಡ"

ಮಗಳು ಶಿವಾನಿ (ಬೇಬಿ ರುಶಿತಾ ಪಾಂಡ್ಯ) ಪತ್ನಿ ರೋಶ್ನಿ (ರಿತುಪರ್ಣಾ ಸೇನ್‌ಗುಪ್ತಾ)ಯೊಂದಿಗೆ ಸುದೀಪ್ ( ಅತುಲ್ ಕುಲಕರ್ಣಿ) ಇರುವ ಕುಟುಂಬ. ರಜೆಯ ದಿನಗಳನ್ನು ಮಾರಿಶಿಷ್‌ನಲ್ಲಿ ಕಳೆಯುವ ಇಚ್ಚೆ ದಂಪತಿಗಳದ್ದು ಆದರೆ ಮಗಳು ಪೂರ್ವಿಕರ ಮನೆಗೆ ಹೋಗೊಣ ಎಂದು ಒತ್ತಾಯ ಮಾಡುತ್ತಿರುತ್ತಾಳೆ.
IFM

ಮಗಳು ಮಾತು ಮೀರಲಾಗದ ದಂಪತಿಗಳು ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಗೆ ಸೂಚಿಸುತ್ತಾರೆ. ಪೂರ್ವಿಕರ ಮನೆಗೆ ಭೇಟಿ ನೀಡುವ ನಿರ್ಧಾರಕ್ಕೆ ಬರುತ್ತಿದ್ದಂತೆ ಘಟಿಸಿದ ಕರಾಳ ಘಟನೆಯೊಂದು ನೆನಪಿಗೆ ಪದೇ ಪದೇ ಬಂದು ಯಾವುದೋ ಒಂದು ಶಕ್ತಿ ಮಗಳನ್ನು ಕಿತ್ತುಕೊಂಡ ಹಾಗೆ ಭಾಸವಾಗುತ್ತದೆ. ಅದು ಜಗತ್ತನ್ನೆ ಕಾಣದ ಮಗುವಿನ ಆತ್ಮ, ಪ್ರತಿಕಾರಕ್ಕೆ ಕಾಯುತ್ತಿರುತ್ತದೆ.

ಚಿತ್ರ ಸಾಗಿದಂತೆ ಕೆಲ ಸಮಯ ಎಡವಿದಂತೆ, ಓಡಿದಂತೆ ಭಾಸವಾಗುತ್ತದೆ. ಚಿತ್ರದ ಕೊನೆಯ 20 ನಿಮಿಷಗಳ ಕ್ಲೈಮ್ಯಾಕ್ಸ್ ಅದ್ಬುತವಾಗಿದೆ.ಮನೆಗೆ ತೆರಳುವ ಮುನ್ನ ಪ್ರೇಕ್ಷಕನಿಗೆ ಸಂದೇಶವೊಂದನ್ನು ಚಿತ್ರ ನೀಡುತ್ತದೆ.
IFM

ಅಕು ಅಕ್ಬರ್ ತಮ್ಮ ಮೊದಲ ನಿರ್ಧೇಶನದ ಚಿತ್ರದಲ್ಲಿ ಸೆಂಚುರಿ ಬಾರಿಸಿದ್ದಾರೆ. ಪರಿಪೂರ್ಣ ತಾಂತ್ರಿಕ ನಿರ್ದೇಶಕ. ಕಥಾ ಪ್ರಸ್ತುತಿಯತ್ತ ಗಮನ ನೀಡಿದ್ದರೆ ಸರಿಯಾಗಿರುತ್ತಿತ್ತು. ಚಿತ್ರದಲ್ಲಿ ಒಂದೇ ಒಂದು ಹಾಡಿದೆ. ಸಿನಿಮಾಟೊಗ್ರಾಫಿ ಮತ್ತು ಹಿನ್ನಲೆ ಸಂಗೀತ ನಿರೀಕ್ಷೆಗೆ ತಕ್ಕಂತೆ ಇವೆ.

ರೀತುಪರ್ಣಾ ಸೆನ್‌ಗುಪ್ತಾ ಗಮನ ಸೆಳೆದಿದ್ದಾರೆ, ಅತುಲ್ ಕುಲಕರ್ಣಿ ಯಾಕೊ ಸಪ್ಪೆ ಅನ್ನಿಸಿದರೆ. ಋಷಿತಾ ಪಾಂಡ್ಯ ಪ್ರೇಕ್ಷಕರನ್ನು ಹಿಡಿದಿಡುತ್ತಾಳೆ.