ಆನಿಮೇಶನ್ ಚಿತ್ರ ನೋಡುವ ಸಂದರ್ಭ ನಾವು ನಮ್ಮೊಳಗಿನ ಬಾಲ್ಯವನ್ನು ಜಾಗೃತಗೊಳಿಸಬೇಕಾಗುತ್ತದೆ ಮತ್ತು ಚಿತ್ರದಲ್ಲೂ ವೀಕ್ಷಕರನ್ನು ಸುಮಾರು ಎರಡು ಗಂಟೆಗಳ ಕಾಲ ಹಿಡಿದಿಡುವ ಸಾಮರ್ಥ್ಯ ಇರಬೇಕು.
'ಜಂಬೊ' ಚಿತ್ರ ಭಾರತದಲ್ಲಿ ಆನಿಮೇಶನ್ ಚಿತ್ರಗಳನ್ನು ಆರಂಭಿಸಿದ 'ಹನುಮಾನ್' ಚಿತ್ರದಷ್ಟು ಮನೊರಂಜನಕಾರಿಯಾಗಿಲ್ಲ ಆದರೆ ಹನುಮಾನ್ ನಂತರ ಇತ್ತೀಚಿಗೆ ಪ್ರದರ್ಶಿತವಾದ ಚಿತ್ರಗಳಿಗಿಂತ ಉತ್ತಮವಾಗಿದೆ.
ಜಂಬೊ, ಜಯವೀರ್ ಅಲಿಯಾಸ್ ಜಂಬೊ ಎಂಬ ಪುಟಾಣಿ ಆನೆಯ ಕಥೆ. ಈ ಆನೆ ತನ್ನ ತಂದೆಯ ಹುಡುಕಾಟದಲ್ಲಿರುತ್ತದೆ. ಈ ಯಾತ್ರೆಯ ಸಂದರ್ಭ ಜಂಬೊ ಒರ್ವ ದಯಾಳು ಆನೆ ತರಬೇತುಗಾರ, ಸಂದೇಶ ರವಾನಿಸುವ ಪಕ್ಷಿ ಮತ್ತು ಒಂದು ಹೆಣ್ಣು ಆನೆಯನ್ನು ಬೇಟಿಯಾಗುತ್ತಾನೆ. ಜಂಬೊ ಯುದ್ಧದಲ್ಲಿ ಹೋರಾಡಬಲ್ಲ ಆನೆಯಾಗುತ್ತಾನೆ ಮತ್ತು ಶತ್ರುಗಳಿಂದ ತನ್ನ ರಾಜ್ಯವನ್ನು ಉಳಿಸಲು ಹೋರಾಡುತ್ತಾನೆ.
'ದ ಲಯನ್ ಕಿಂಗ್' ಚಿತ್ರಕ್ಕೂ ಜಂಬೊ ಚಿತ್ರಕ್ಕೂ ಕೆಲವು ಸಾಮ್ಯತೆಗಳಿವೆ. ಆರಂಭದಲ್ಲಿ ಚಿತ್ರ ಪ್ರೇಕ್ಷಕರ ಗಮನದ ಮೇಲೆ ಹಿಡಿತ ಸಾಧಿಸುವಲ್ಲಿ ವಿಫಲವಾಗುತ್ತದೆ ಆದರೆ ಜಂಬೊ ತನ್ನ ತಂದೆಯನ್ನು ಕೊಂದ ಶತ್ರು ರಾಜ್ಯದ ಆನೆಯೊಂದಿಗೆ ಹೋರಾಡುವ ನಿರ್ಧಾರ ಕೈಗೊಂಡ ನಂತರ ಚಿತ್ರ ಪ್ರೇಕ್ಷಕರ ಗಮನ ಸೆಳೆಯುತ್ತದೆ.
ಪ್ರತೀಕಾರ, ರೊಮಾನ್ಸ್, ಆಕ್ಷ್ಯನ್‌ನಂತಹ ಹಿಂದಿ ಚಿತ್ರಗಳ ತತ್ವಗಳು ಜಂಬೊದಲ್ಲೂ ಇವೆ. ಇದಲ್ಲದೆ ಒಂದು ಹಾಡು ಮತ್ತು ಅಕ್ಷಯ್ ಕುಮಾರ್ ಮೇಲೆ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಅಕ್ಷಯ್, ಡಿಂಪಲ್ ಕಪಾಡಿಯಾ, ರಾಜ್‌ಪಾಲ್ ಯಾದವ್, ಗುಲ್ಶನ್ ಗ್ರೋವರ್ ತಮ್ಮ ಧ್ವನಿಗಳಿಂದ ಪಾತ್ರಗಳಲ್ಲಿ ಜೀವತುಂಬಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ ಜಂಬೊ ಉತ್ತಮ ಚಿತ್ರ ಮತ್ತು ಮಕ್ಕಳಿಗೆ ಇಷ್ಟವಾಗುತ್ತದೆ.