ಇದು ವಿಶ್ವದ ಜನಸಂಖ್ಯೆಯಲ್ಲಿ ಕೆಲವು ದೇಶಗಳ ಪಾಲು ಎಷ್ಟೆಂದು ತೋರಿಸುವ ನಕ್ಷೆ.
ದೇಶದ ಅಂಕಿಅಂಶ
2001
2011
ವೃದ್ಧಿ
10 ವರ್ಷದಲ್ಲಿ ಶೇಕಡಾ ಹೆಚ್ಚಳ
ಒಟ್ಟು
1,02,87,37,436
1,21,01,93,422
18,14,55,986
17.64 %
ಪುರುಷರು
53,22,23,090
62,37,24,248
9,15,01,158
17.19
ಮಹಿಳೆಯರು
49,65,14,346
58,64,69,174
8,99,54,828
18.12
ಇದು ಭಾರತ ದೇಶದ ಒಟ್ಟು ಅಂಕಿ ಅಂಶ
ಕೇಂದ್ರವು ಗುರುವಾರ ಬಿಡುಗಡೆ ಮಾಡಿದ 2011 ಜನಗಣತಿ ವರದಿಯ ಅನುಸಾರ, ಕರ್ನಾಟಕದ ಜನಸಂಖ್ಯೆ ಈ ಒಂದು ದಶಕದಲ್ಲಿ (2001ರ ಜನಗಣತಿಯಿಂದೀಚೆಗೆ) 83 ಲಕ್ಷ ಹೆಚ್ಚಳ ಕಂಡು, 6.11 ಕೋಟಿಗೆ ತಲುಪಿದೆ. ಇದರೊಂದಿಗೆ ಅತೀ ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯಗಳಲ್ಲಿ ಕರ್ನಾಟಕವು 9ನೇ ಸ್ಥಾನ ಪಡೆದಿದೆ.
2001ರ ಜನಗಣತಿಯಲ್ಲಿ ರಾಜ್ಯದ ಜನ ಸಂಖ್ಯೆಯು 5.28 ಲಕ್ಷ ಇತ್ತು. ಈ ಹತ್ತು ದಶಗಳಲ್ಲಿ ಜನಸಂಖ್ಯೆಯ ವೃದ್ಧಿಯ ದರವು ಕೂಡ ಶೇ.2ರಷ್ಟು ಕುಸಿತ ಕಂಡಿದೆಯಾದರೂ, ಲಿಂಗಾನುಪಾತದ ಪ್ರಮಾಣ ಏರಿಕೆಯಾಗಿದೆ. ಅಂದರೆ ಸಾವಿರ ಪುರುಷರಿಗೆ ಅನುಗುಣವಾಗಿ 968 ಮಹಿಳೆಯರ ಸಂಖ್ಯೆಯಿದೆ.
ಸಾಕ್ಷರತಾ ಪ್ರಮಾಣವು ಕೂಡ ಶೇ.66ರಿಂದ ಶೇ.75ಕ್ಕೆ ಏರಿಕೆಯಾಗಿದ್ದು ವಿಶೇಷ. ಅವರಲ್ಲಿಯೂ ಶೇ. 82ರಷ್ಟು ಪುರುಷರು ಸಾಕ್ಷರರಾಗಿದ್ದರೆ, ಶೇ.68ರಷ್ಟು ಮಹಿಳೆಯರು ಅಕ್ಷರಸ್ಥರಾಗಿದ್ದಾರೆ. ಇಲ್ಲೂ ಲಿಂಗ ತಾರತಮ್ಯ ಇನ್ನೂ ಎದ್ದು ಕಾಣುತ್ತಿದೆ.
2012ರಲ್ಲಿ ಅಂತಿಮ ವರದಿ ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರಾದ ಸಿ.ಚಂದ್ರಮೌಳಿ ಅವರು ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಉಪಸ್ಥಿತಿಯಲ್ಲಿ ಜನಗಣತಿ 2011ರ ಪ್ರಾಥಮಿಕ ವರದಿ ಬಿಡುಗಡೆ ಮಾಡುತ್ತಾ, ಜನಗಣತಿಯ ಅಂತಿಮ ವರದಿಯು ಮುಂದಿನ ವರ್ಷ ಲಭ್ಯವಾಗಲಿದ್ದು, ಏನಾದರೂ ತಪ್ಪುಗಳಿದ್ದಲ್ಲಿ ಆಗಷ್ಟೇ ತಿಳಿಯಬಹುದು ಎಂದರು. 2001ರ ಜನಗಣತಿಯಲ್ಲಿ ಶೇ.2ರಷ್ಟು ದೋಷಗಳು ಇದ್ದವು.
2011ರಲ್ಲಿ ನಡೆಸಿದ ಜನಗಣತಿಯು ಭಾರತದ 15ನೇ ಜನಗಣತಿಯಾಗಿದ್ದು, ಮೊದಲನೇ ಬಾರಿ ನಡೆದದ್ದು 1872ರಲ್ಲಿ. ಎಲ್ಲ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2200 ಕೋಟಿ ರೂಪಾಯಿ ವೆಚ್ಚದಲ್ಲಿ ಜನಗಣತಿ ನಡೆಸಲಾಗಿತ್ತು. 27 ಲಕ್ಷ ಜನಗಣತಿದಾರರು ಇದರಲ್ಲಿ ಭಾಗಿಯಾಗಿದ್ದು, 8000 ಮೆಟ್ರಿಕ್ ಟನ್ ಕಾಗದ ಮತ್ತು 10,500 ಮೆಟ್ರಿಕ್ ಟನ್ ಇತರ ಸಾಮಗ್ರಿಗಳನ್ನು ಬಳಸಲಾಗಿದೆ.