ದೆಹಲಿಗೆ ತೆರಳಿದ್ದ ರಾಮನಾಥ್ ಕೋವಿಂದ್ ಅವರು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿ ತಮ್ಮ ರಾಜಿನಾಮೆ ಪತ್ರ ಸಲ್ಲಿಕೆ ಮಾಡಿದ್ದು, ಪ್ರಣಬ್ ಮುಖರ್ಜಿ ಅವರು ಕೋವಿಂದ್ ಅವರ ರಾಜಿನಾಮೆಯನ್ನು ಅಂಗೀಕರಿಸಿದ್ದಾರೆ. ಅಲ್ಲದೇ ಪ್ರಣಬ್ ಮುಖರ್ಜಿ ಅವರು ರಾಮನಾಥ್ ಕೋವಿಂದ್ ಅವರಿಗೆ ಶುಭಾಷಯ ತಿಳಿಸಿದ್ದಾರೆ.