ಗ್ಯಾರಂಟಿ ಬೇಡ ಎನ್ನಿ ಎಂದ ಬಸವರಾಜ ರಾಯರೆಡ್ಡಿ: ಈ ಕಂಡೀಷನ್ ಮೊದ್ಲೇ ಹೇಳ್ಬೇಕಿತ್ತು ಎಂದ ಜನ
ಸಾರ್ವನಿಕರೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವೇನು ಗ್ಯಾರಂಟಿ ಕೊಡಿ ಎಂದು ಕೇಳಿದ್ವಾ? ನೀವಾಗಿಯೇ ಗ್ಯಾರಂಟಿ ಕೊಡ್ತೀವಿ ಎಂದು ಅಧಿಕಾರಕ್ಕೆ ಬಂದ್ರಿ. ಇದೇ ಕಂಡೀಷನ್ ಚುನಾವಣೆಗೂ ಮೊದಲೇ ಹೇಳಬೇಕಿತ್ತು. ಹಣವಿಲ್ಲ ಎಂದರೆ ಗ್ಯಾರಂಟಿ ಯೋಜನೆ ಕೊಡ್ತೀವಿ ಎಂದಿದ್ದೇಕೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು, ವಿವಾದದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಲ್ಲ ಎಂದಿದ್ದಾರೆ.