‘ರಾಮಜನ್ಮಭೂಮಿ ಅಯೋಧ್ಯೆ ಅಲ್ಲ ಎಂದು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದರೆ ಹೇಗಿರುತ್ತೆ?’
ಬುಧವಾರ, 17 ಮೇ 2017 (06:57 IST)
ನವದೆಹಲಿ: ರಾಮನ ಜನ್ಮಭೂಮಿ ಅಯೋಧ್ಯೆಯಲ್ಲ ಎಂದು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದರೆ ಹಿಂದೂಗಳ ಭಾವನೆಗೆ ಧಕ್ಕೆ ತಂದ ಹಾಗಾಗುವುದಿಲ್ಲವೇ? ಅದೇ ರೀತಿ ತ್ರಿವಳಿ ತಲಾಖ್ ವಿಚಾರ ಮುಸ್ಲಿಮರ ಧಾರ್ಮಿಕ ವಿಚಾರ ಎಂದು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಬಿಎಲ್ ಬಿ) ಹೇಳಿದೆ.
ತ್ರಿವಳಿ ತಲಾಖ್ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಆಲಿಸಿದ ಮೇಲೆ ಮುಸ್ಲಿಂ ಮಂಡಳಿ ಇಂತಹದ್ದೊಂದು ಪ್ರಶ್ನೆ ಎತ್ತಿದೆ. ತಲಾಖ್ ಪದ್ಧತಿಯನ್ನು ಮುಸ್ಲಿಮರು ಕಳೆದ 1,400 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ.
ಇದರಿಂದ ಇದಕ್ಕೆ ಕಾನೂನಿನ ಚೌಕಟ್ಟು ನೀಡುವುದು ಬೇಡ ಎಂದು ಮುಸ್ಲಿಂ ಬೋರ್ಡ್ ಪರ ವಕೀಲ ಕಪಿಲ್ ಸಿಬಲ್ ಹೇಳಿದ್ದಾರೆ. ಇದು ಮುಸ್ಲಿಮರ ಧಾರ್ಮಿಕ ವಿಚಾರ. ಇದನ್ನು ಬೇಡ ಎನ್ನಲು ನಾವ್ಯಾರು ಎಂದು ಅವರು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ