‘ವಾಜಪೇಯಿ ಸರ್ಕಾರ ಇದ್ದಿದ್ದರೆ 10 ವರ್ಷ ಮೊದಲೇ ಈ ಕೆಲಸವಾಗುತ್ತಿತ್ತು’

ಶುಕ್ರವಾರ, 26 ಮೇ 2017 (12:36 IST)
ಅಸ್ಸಾಂ: ಈ ಕೆಲಸ ಎಂದೋ ಆಗಬೇಕಿತ್ತು. ಕೇಂದ್ರದಲ್ಲಿ ವಾಜಪೇಯಿ ಸರ್ಕಾರ ಇದ್ದಿದ್ದರೆ 10 ವರ್ಷ ಮೊದಲೇ ಈ ಕೆಲಸ ಆಗುತ್ತಿತ್ತು ಎಂದು ಅಸ್ಸಾಂನಲ್ಲಿ ಧೋಲಾ-ಸಾಧಿಯಾ ಸೇತುವೆ ಉದ್ಘಾಟಿಸಿ ಪ್ರಧಾನಿ ಮೋದಿ ಹೇಳಿದ್ದಾರೆ.

 
ಕೇಂದ್ರ ಮೂರು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಅಸ್ಸಾಂನ ತಿನ್ ಸುಕಿಯಲ್ಲಿ ದೇಶದ ಅತೀ ಉದ್ದದ ಸೇತುವೆ ಉದ್ಘಾಟಿಸಿ ಮಾತನಾಡಿದ ಅವರು, ರಾಲಿಯನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ಸೇತುವೆಯಿಂದ ಭಾರತದ ಆರ್ಥಿಕತೆ ಬೆಳೆಯಲಿದೆ. ಇದರಿಂದ ಸೈನಿಕರಿಗೆ, ರೈತರಿಗೆ ಅನುಕೂಲವಾಗಲಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ದೇಶದ ಅತೀ ಉದ್ದದ ಈ ಸೇತುವೆಗೆ ಖ್ಯಾತ ಗಾಯಕ ಭೂಪೇನ್ ಹಜಾರಿಕಾ ಹೆಸರಿಡುವುದಾಗಿ ಅವರು ಘೋಷಿಸಿದ್ದಾರೆ. ಇದರೊಂದಿಗೆ ಅಟಲ್ ಜೀ ಕನಸು ನನಸಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ