‘ಕಸಬ್ ಬಡಪಾಯಿ, ಕುಲಭೂಷಣ್ ಒಬ್ಬ ದೊಡ್ಡ ಭಯೋತ್ಪಾದಕ’

ಭಾನುವಾರ, 21 ಮೇ 2017 (04:35 IST)
ಇಸ್ಲಾಮಾಬಾದ್: ಭಾರತದ ಮಾಜಿ ನೌಕಾ ಪಡೆ ಅಧಿಕಾರಿ ಕುಲಭೂಷಣ್ ಜಾದವ್ ಮುಂಬೈ ದಾಳಿಕೋರ ಅಜ್ಮಲ್ ಕಸಬ್ ಗಿಂತಲೂ ದೊಡ್ಡ ಭಯೋತ್ಪಾದಕ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಹೇಳಿಕೊಂಡಿದ್ದಾರೆ.

 
ಕುಲಭೂಷಣ್ ಭಾರತೀಯ ಗುಪ್ತಚರ ಎಂದಿರುವ ಪಾಕ್ ಅವರು ಬಲೂಚಿಸ್ತಾನದಲ್ಲಿ ಗಲಭೆ ನಡೆಸಲು ಕಾರಣಕರ್ತರಾಗಿದ್ದರು ಎಂದು ಆರೋಪಿಸಿದೆ. ಆದರೆ ಜಾದವ್ ವೈಯಕ್ತಿಕ ಕೆಲಸದ ಮೇಲೆ ಇರಾನ್ ಗೆ ತೆರಳಿದ್ದಾಗ ಅವರನ್ನು ಅಪಹರಿಸಿ ಇಲ್ಲಸಲ್ಲದ ಆರೋಪ ಹೊರಿಸಲಾಗುತ್ತಿದೆ ಎಂಬುದು ಭಾರತದ ಆರೋಪ.

ಈ ಪ್ರಕರಣ ಐಸಿಜೆ ಮಟ್ಟಿಲೇರಿದ್ದು, ಕುಲಭೂಷಣ್ ಗೆ ವಿಧಿಸಿದ್ದ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ಬಂದಿದೆ. ಹೀಗಾಗಿ ಈ ಪ್ರಕರಣವನ್ನು ಐಸಿಜೆ ಬಳಿಗೆ ಕೊಂಡೊಯ್ಯಲು ಪಾಕ್ ಒಪ್ಪಬಾರದಿತ್ತು ಎಂದು ಮುಷರಫ್ ಹೇಳಿಕೊಂಡಿದ್ದಾರೆ.

ಕಸಬ್ ಒಬ್ಬ ಬಡಪಾಯಿಯಾಗಿದ್ದ. ಆದರೆ ಜಾದವ್ ಎಷ್ಟು ಪಾಕಿಸ್ತಾನಿಯರನ್ನು ಕೊಂದ ಎನ್ನುವುದೇ ಲೆಕ್ಕಕ್ಕೆ ಸಿಗದು ಎಂದು ಅವರು ಹೇಳಿಕೊಂಡಿದ್ದಾರೆ. ಅಲ್ಲದೆ, ಪಾಕ್ ಈ ವಿಚಾರದಲ್ಲಿ ಐಸಿಜೆ ತೀರ್ಪನ್ನು ಪಾಲಿಸಬೇಕೆಂದೇನಿಲ್ಲ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ