‘ನಮ್ಮ ನಡುವೆ ಹುಳಿ ಹಿಂಡಲು ಯಾರಿಗೂ ಸಾಧ್ಯವಿಲ್ಲ’

ಸೋಮವಾರ, 1 ಮೇ 2017 (08:28 IST)
ನವದೆಹಲಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋಲುಂಡ ನಂತರ ದೆಹಲಿಯಲ್ಲಿ ನಾಯಕತ್ವ ಬದಲಾವಣೆಯಾಗಬೇಕು ಎಂದು ಎಎಪಿ ಶಾಸಕರೇ ಆಗ್ರಹಿಸುತ್ತಿದ್ದಾರೆ ಎಂಬ ಸುದ್ದಿಯನ್ನು ಸಿಎಂ ಕೇಜ್ರಿವಾಲ್ ನಿರಾಕರಿಸಿದ್ದಾರೆ.

 
ಕೇಜ್ರಿವಾಲ್ ಬದಲಿಗೆ ಕುಮಾರ್ ವಿಶ್ವಾಸ್ ರನ್ನು ಸಿಎಂ ಮಾಡಬೇಕು ಎಂದು ಎಎಪಿ ಶಾಸಕರು ಒತ್ತಾಯಿಸುತ್ತಿದ್ದಾರೆ ಎಂದು ಬಿಜೆಪಿ ಗುಲ್ಲೆಬ್ಬಿಸಿತ್ತು. ಆದರೆ ಕೇಜ್ರಿವಾಲ್ ಇದಕ್ಕೆಲ್ಲಾ ತೆರೆ ಎಳೆಯುವ ಪ್ರಯತ್ನ ನಡೆಸಿದ್ದಾರೆ.

‘ನಾನು ಮತ್ತು ಕುಮಾರ್ ಅಣ್ಣ ತಮ್ಮಂದಿರಂತೆ. ನಮ್ಮ ನಡುವೆ ಹುಳಿ ಹಿಂಡಲು ಯಾರಿಗೂ ಸಾಧ್ಯವಿಲ್ಲ. ನಾವು ಪರಸ್ಪರ ಚೆನ್ನಾಗಿದ್ದೇವೆ’ ಎಂದು ಕೇಜ್ರಿವಾಲ್ ಗುಡುಗಿದ್ದಾರೆ.

ದೆಹಲಿ ಚುನಾವಣೆ ಸಂದರ್ಭದಲ್ಲಿ ಕೇಜ್ರಿವಾಲ್ ಮತ್ತು ಪಕ್ಷದ ಕಾರ್ಯಕರ್ತರ ನಡುವೆ ಸಂವಹನದ ಕೊರತೆಯಿತ್ತು ಎಂದು ವರದಿಯಾಗಿತ್ತು. ಈ ಹಿನ್ನಲೆಯಲ್ಲಿ ಕಾರ್ಯಕರ್ತರು ಹಾಗೂ ಕೆಲವು ಶಾಸಕರು ನಾಯಕತ್ವ ಬದಲಾವಣೆಗೆ ಆಗ್ರಹಿಸುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ