‘ಭಾರತದಲ್ಲಿ ರಾಹುಲ್ ಗಾಂಧಿ ಭಾಷಣ ಯಾರೂ ಕೇಳಲ್ಲ, ಅದಕ್ಕೇ ಅಮೆರಿಕಾಗೆ ಹೋಗಿದ್ದಾರೆ’

ಗುರುವಾರ, 14 ಸೆಪ್ಟಂಬರ್ 2017 (10:28 IST)
ನವದೆಹಲಿ: ಭಾರತದಲ್ಲಿ ರಾಹುಲ್ ಗಾಂಧಿಯಂತಹ ವಿಫಲ ರಾಜಕಾರಣಿಯ  ಭಾಷಣ ಯಾರೂ ಕೇಳೋರಿಲ್ಲ. ಅದಕ್ಕೇ ದೂರದ ಅಮೆರಿಕಾಕ್ಕೆ ಹೋಗಿ ಅಲ್ಲಿ ಭಾಷಣ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.

 
ಅಮೆರಿಕಾದ ಕ್ಯಾಲಿಫೋರ್ನಿಯಾ ವಿವಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದ ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಅಮಿತ್ ಶಾ ಟಾಂಗ್ ಕೊಟ್ಟಿದ್ದಾರೆ.

ವಂಶ  ರಾಜಕಾರಣದ ಬಗ್ಗೆ ಮಾತನಾಡಿರುವ ರಾಹುಲ್ ಮಾತುಗಳಿಗೆ ಟಾಂಗ್ ಕೊಟ್ಟಿರುವ ಶಾ ಬಿಜೆಪಿ ದೇಶದಲ್ಲಿ ವಂಶ ರಾಜಕಾರಣವನ್ನು ಕಿತ್ತು ಹಾಕಿದೆ. ನಾವು ಕಾರ್ಯನಿರ್ವಹಣೆಯಲ್ಲಿ ವಿಶ್ವಾಸ ಹೊಂದಿದ್ದೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ.. ಟೀಂ ಇಂಡಿಯಾ ಮೇಲೆ ಗಂಗೂಲಿಗೆ ವಿಶ್ವಾಸವಿಲ್ಲವಂತೆ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ