ತಮಿಳುನಾಡು ರಾಜಕೀಯದಲ್ಲಿ ಮತ್ತೆ ಹೈಡ್ರಾಮಾ

ಸೋಮವಾರ, 21 ಆಗಸ್ಟ್ 2017 (11:09 IST)
ಚೆನ್ನೈ: ತಮಿಳುನಾಡಿನಲ್ಲಿ ಮತ್ತೆ ರಾಜಕೀಯ ಹೈಡ್ರಾಮಾ ನಡೆಯುವ ಸೂಚನೆ ಕಂಡುಬಂದಿದೆ. ಮತ್ತೆ ಪನೀಸ್ ಸೆಲ್ವಂ ಆಡಳಿತಾರೂಢ ಎಐಎಡಿಎಂಕೆ ಬಣದೊಂದಿಗೆ ವಿಲೀನಗೊಳ್ಳುವ ಸೂಚನೆ ದಟ್ಟವಾಗಿದೆ.

 
ಪನೀರ್ ಸೆಲ್ವಂ ಮತ್ತು ಅವರ ಬೆಂಬಲಿಗರಾದ ಪಾಂಡ್ಯರಾಜನ್  ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಅವರ ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ.

ಇಂದು ಸಂಜೆಯೊಳಗೆ ತಮಿಳುನಾಡಿನ ಜನತೆಗೆ  ಶುಭ ಸುದ್ದಿ ಕೊಡಲಿದ್ದೇವೆ ಎಂದು ಶಾಸಕ ಷಣ್ಮುಗಂ ತಿಳಿಸಿದ್ದಾರೆ. ಶಶಿಕಲಾ ನಟರಾಜನ್ ಬೆಂಬಲಿಗರ ವಿರೋಧದಿಂದಾಗಿ ಎರಡೂ ಬಣಗಳು ವಿಲೀನವಾಗುವುದು ವಿಳಂಬವಾಗಿದೆ. ಆದರೆ ಇಂದು ಶಶಿಕಲಾ ನಟರಾಜನ್ ಅವರನ್ನು ಕಡೆಗಣಿಸಿ ಎಡಪ್ಪಾಡಿ ಪಳನಿಸ್ವಾಮಿ ಬಣ ಪನೀರ್ ಸೆಲ್ವಂ ಜತೆ ಕೈಜೋಡಿಸಲಿರುವ ಸಾಧ್ಯತೆ ದಟ್ಟವಾಗಿದೆ.

ಪನೀರ್ ಸೆಲ್ವಂಗೆ ಉಪಮುಖ್ಯಮಂತ್ರಿ ಪಟ್ಟ ಮತ್ತು ಹಣಕಾಸು ಖಾತೆಯನ್ನು ನೀಡಲು ಪಳನಿಸ್ವಾಮಿ ಸಿದ್ದರಾಗಿದ್ದಾರೆ ಎನ್ನಲಾಗಿದೆ. ಪನೀರ್ ಸೆಲ್ವಂ ಜತೆಗೆ ಅವರ ನಿಕಟವರ್ತಿ ಪಾಂಡ್ಯ ರಾಜನ್ ಗೂ ಮಂತ್ರಿ ಸ್ಥಾನ ಸಿಗಲಿದೆ ಎನ್ನಲಾಗಿದೆ. ಇದೆಲ್ಲದಕ್ಕೂ ಇಂದು ಸಂಜೆ ಉತ್ತರ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ.. ಈ ಯುವನಟನೊಂದಿಗೆ ಐಶ್ವರ್ಯಾ ರೈ ರೊಮ್ಯಾನ್ಸ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ