‘ಎಲ್ಲಾ ಗೊತ್ತಿದ್ದೂ ರಾಹುಲ್ ಗಾಂಧಿ ಸುಮ್ಮನಿದ್ದುದೇಕೆ?’

ಮಂಗಳವಾರ, 1 ಆಗಸ್ಟ್ 2017 (09:17 IST)
ನವದೆಹಲಿ: ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಗೆ ಕೈ ಕೊಟ್ಟು ನಿತೀಶ್ ಕುಮಾರ್ ಬಿಜೆಪಿ ಜತೆ ಕೈ ಜೋಡಿಸುತ್ತಾರೆ ಎಂದು ಮೊದಲೇ ಗೊತ್ತಿತ್ತು ಎಂಬ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ನಿತೀಶ್ ಕುಮಾರ್ ತಿರುಗೇಟು ನೀಡಿದ್ದಾರೆ.


‘ಬಿಹಾರದಲ್ಲಿ ಮಹಾಘಟಬಂಧನ್ ಮುರಿದು ಬೀಳಲಿದೆ ಎಂದು ರಾಹುಲ್ ಹೇಳುತ್ತಾರೆ. ಹಾಗಿದ್ದರೆ ಯಾಕೆ ಅವರು ನಾವು ಹಿಂದೆ ಭೇಟಿಯಾಗಿದ್ದಾಗ ಯಾಕೆ ಈ ಬಗ್ಗೆ ಈ ವಿಷಯ ಪ್ರಸ್ತಾಪಿಸಿಲ್ಲ?’ ಎಂದು ನಿತೀಶ್ ಕುಮಾರ್ ಪ್ರಶ್ನಿಸಿದ್ದಾರೆ.

‘ಆರ್ ಜೆಡಿ ಸಹವಾಸ ನನಗೆ ಸಾಕಾಯ್ತು. ಭ್ರಷ್ಟಾಚಾರ ವಿಚಾರದಲ್ಲಿ ರಾಜಿಯಾಗುವ ಮಾತೇ ಇಲ್ಲ. ತೇಜಸ್ವಿ ಯಾದವ್ ಮೇಲಿನ ಆರೋಪಗಳಿಗೆ ಉತ್ತರಿಸುವ ಬದಲು, ನಿತೀಶ್ ಏನು ಸಿಬಿಐನವರೋ ಅಥವಾ ಪೊಲೀಸರೋ ಎಂದು ವ್ಯಂಗ್ಯವಾಡಿದರು. ಇನ್ನು ಮಹಾಘಟಬಂಧನದಲ್ಲಿ ಮುಂದುವರಿಯುವದರಲ್ಲಿ ಅರ್ಥವಿಲ್ಲವೆನಿಸಿತು. ಅದಕ್ಕೇ ಹೊರಬಂದೆ’ ಎಂದು ನಿತೀಶ್ ಸ್ಪಷ್ಟನೆ ನೀಡಿದ್ದಾರೆ.

ಇನ್ನೊಂದೆಡೆ ಪ್ರಧಾನಿ ಮೋದಿಗೆ ಜೈಕಾರ ಹಾಕಿರುವ ಜೆಡಿಯು ನಾಯಕ 2019 ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಗೆಲುವನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ. ಇನ್ನೊಂದೆಡೆ ನಿತೀಶ್ ಹೇಳಿಕೆಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.

ಇದನ್ನೂ ಓದಿ..  ಹಾಲಿನೊಂದಿಗೆ ಇವುಗಳನ್ನು ಸೇವಿಸುವ ಮೊದಲು ಎಚ್ಚರಿಕೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ