ತಂದೆಯಿಂದ ಅತ್ಯಾಚಾರಕ್ಕೊಳಗಾದ 10 ವರ್ಷದ ಬಾಲಕಿ ಗರ್ಭಿಣಿ
ಈ ಘಟನೆಯ ತನಿಖೆ ನಡೆಸಿದ ನ್ಯಾಯಾಲಯ ಇದು ನಾಗರಿಕ ಸಮಾಜವೇ ತಲೆ ತಗ್ಗಿಸುವ ವಿಚಾರ ಎಂದಿದೆ. ಇನ್ನು, 10 ವರ್ಷದ ಬಾಲಕಿಗೆ ಗರ್ಭಪಾತ ಮಾಡಲು ಸೂಕ್ತ ವೈದ್ಯಕೀಯ ಪರೀಕ್ಷೆಗೆ ಸೂಚನೆ ನೀಡಿದೆ.
ಒಂದು ವೇಳೆ ಮಗು ಬದುಕುಳಿಯುವ ಸ್ಥಿತಿಯಿದ್ದರೆ, ಪೋಷಕರು ಮಗುವನ್ನು ಪಾಲನೆ ಮಾಡಲು ಬಯಸದೇ ಇದ್ದರೆ ಶಿಶು ಪಾಲನಾ ಸಮಿತಿಯು ಮಗುವಿನ ಜವಾಬ್ಧಾರಿ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ತೀರ್ಪಿತ್ತಿದೆ.