ಮಗಳ ಮೇಲೆ ಅಪ್ಪನಿಂದ ಅತ್ಯಾಚಾರ, ಪೊಲೀಸ್ ಠಾಣೆ ಮೆಟ್ಟಿಲೇರಿದ ತಾಯಿ

ಗುರುವಾರ, 28 ಜುಲೈ 2016 (10:56 IST)
11 ವರ್ಷದ ಮಗಳ ಮೇಲೆ ತಂದೆಯೇ ಅತ್ಯಾಚಾರವೆಸಗಿದ ಹೇಯ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ತನ್ನ ಪತಿಯ ಈ ಪೈಶಾಚಿಕ ಕೃತ್ಯದಿಂದ ಆಘಾತಕ್ಕೀಡಾಗಿರುವ ತಾಯಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ವಸೈ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು ಮನೆಗೆಲಸದವಳಾಗಿ ಕೆಲಸ ಮಾಡುತ್ತಿರುವ ತಾಯಿ ಮನೆಯಲ್ಲಿ ಇಲ್ಲದಿದ್ದಾಗ ಅನೇಕ ಬಾರಿ ತಂದೆ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಸೋಮವಾರ ತನಗೆ ಹೊಟ್ಟೆ ನೋವೆಂದು ಬಾಲಕಿ ತಾಯಿ ಬಳಿ ಹೇಳಿಕೊಂಡಿದ್ದಾಳೆ. ಆಕೆಯನ್ನು ಮರಳಿ ಪ್ರಶ್ನಿಸಿದಾಗ ತಂದೆ ನಡೆಸುತ್ತಿದ್ದ ಕ್ರೂರ ಕೃತ್ಯವನ್ನಾಕೆ ಹೊರಗೆಡವಿದ್ದಾಳೆ.


ವಿಪರೀತ ಕುಡಿಯುತ್ತಿದ್ದ ಆರೋಪಿ ಮತ್ತಿನಲ್ಲಿ ಈ ಕೃತ್ಯವನ್ನು ಎಸಗಿದ್ದಾನೆ ಎಂದು ಊಹಿಸಲಾಗಿದೆ. ಕಳೆದ ಕೆಲ ತಿಂಗಳಿಂದ ನಿರಂತರವಾಗಿ ಆತ ಮಗಳ ಮೇಲೆ ಲೈಂಗಿಕ ದೌರ್ಜನ್ಯಗೈದಿದ್ದು ವಿಷಯವನ್ನು ತಾಯಿ ಅಥವಾ ಇನ್ಯಾರ ಬಳಿಯಾದರೂ ಬಾಯ್ಬಿಟ್ಟರೆ ಪರಿಣಾಮ ನೆಟ್ಟಗಿರುವುದಿಲ್ಲ ಮಗಳಿಗೆ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ. ವಿಷಯ ಬೆಳಕಿಗೆ ಬಂದಾಗ ಪೀಡಿತ ಬಾಲಕಿಯ ತಾಯಿ ಗಂಡನ ಬಳಿ ಈ ಕುರಿತು ಪ್ರಶ್ನಿಸಿದ್ದಾಳೆ. ತಕ್ಷಣ ಆತ ಮನೆಯಿಂದ ಪರಾರಿಯಾಗಿದ್ದಾನೆ.

ಪತಿಯ ವಿರುದ್ಧ ತಾಯಿ ವಾಲಿವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

 ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ