ಸ್ಕ್ರ್ಯಾಪ್‌ಗಳನ್ನು ಮಾರಿ 1163 ಕೋಟಿ ರೂ. ಸಂಪಾದಿಸಿದ ಮೋದಿ ಸರ್ಕಾರ!
ಕೇಂದ್ರ ಸರ್ಕಾರದ ಸಚಿವಾಲಯದಲ್ಲಿದ್ದ ಅಂದಾಜು 96 ಲಕ್ಷಕ್ಕೂ ಅಧಿಕ ಅಗತ್ಯವಿಲ್ಲದ ಫೈಲ್‌ಗಳು, ಹಾಳಾಗಿರುವ ಕಚೇರಿಯ ಉಪಕರಣಗಳು, ಬಳಕೆಯಾಗದ ವಾಹನಗಳನ್ನು, ಸ್ಕ್ರ್ಯಾಪ್‌ಗಳನ್ನು ಮಾರಾಟ ಮಾಡುವ ಮೂಲಕ ಕೇಂದ್ರ ಸರ್ಕಾರ ಬರೋಬ್ಬರಿ 1163 ಕೋಟಿ ರೂಪಾಯಿ ಸಂಪಾದನೆ ಮಾಡಿದ್ದು, ಮೋದಿ ಸರ್ಕಾರ ಮುಂದಿನ ಎರಡು ಚಂದ್ರಯಾನ-3 ಯೋಜನೆಗಳನ್ನು ಮಾಡಲು ಸಾಧ್ಯವಾಗುವಷ್ಟು ಹಣವನ್ನು ಸಂಪಾದಿಸಿದೆ ಅಂತಾ ಮೂಲಗಳು ಮಾಹಿತಿ ನೀಡಿವೆ.