ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1247 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ನಿನ್ನೆ ಹೋಲಿಸಿದರೆ ಕುಸಿತ ಕಂಡು ಬಂದಿದೆ.
ಕೇಂದ್ರ ಸರಕಾರ ನೀಡಿದ ಮಾಹಿತಿ ಪ್ರಕಾರ ಮಂಗಳವಾರ ದೇಶದಲ್ಲಿ ಒಂದೇ ಒಂದು ಕೊರೊನಾ ಸಾವು ವರದಿಯಾಗಿದೆ. ಅದು ಉತ್ತರ ಪ್ರದೇಶದಲ್ಲಿ. ಇದರಿಂದ ಒಟ್ಟಾರೆ ಸಾವಿನ ಸಂಖ್ಯೆ 5,21,966ಕ್ಕೆ ಏರಿಕೆಯಾಗಿದೆ.
ನಿನ್ನೆ ಒಂದೇ ದಿನ ದೇಶದಲ್ಲಿ 2183 ಸೋಂಕು ಪ್ರಕರಣಗಳು ಕಂಡು ಬಂದಿದ್ದು, 214 ಸಾವು ವರದಿಯಾಗಿತ್ತು. ನಿನ್ನೆ ಹೋಲಿಸಿದರೆ ಇಂದು ಇಳಿಕೆ ಕಂಡು ಬಂದಿರುವುದು ಸಮಾಧಾನ ತಂದಿದೆ.
ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 4,30,45,527ಕ್ಕೆ ಏರಿಕೆಯಾದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ 11,860ಕ್ಕೆ ಕುಸಿದಿದೆ.