ನವದೆಹಲಿ : ಭಾರತೀಯ ಸೇನಾ ಮುಖ್ಯಸ್ಱರ ಸ್ಥಾನಕ್ಕೆ ಇದೇ ಮೊದಲ ಬಾರಿಗೆ ಕಾರ್ಪ್ ಎಂಜಿನೀಯರ್ ನೇಮಕ ಮಾಡಲಾಗಿದೆ.
ಹೌದು ಹಾಲಿ ಸೇನಾ ಮುಖ್ಯಸ್ಥ ಎಂಎಂ ನರವಾನೆ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನಲೆಯಲ್ಲಿ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ನೇಮಕಗೊಂಡಿದ್ದಾರೆ.
ಕೇಂದ್ರ ರಕ್ಷಣಾ ಸಚಿವಾಲಯ ಮನೋಜ್ ಪಾಂಡೆ ಮುಂದಿನ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ ಎಂದು ಅಧಿಕೃತ ಪ್ರಕಟಣೆ ಹೊರಡಿಸಿದೆ. ಮನೋಜ್ ಮುಕುಂದ್ ನರವಾನೆ ಅವರ 28 ತಿಂಗಳ ಅಧಿಕಾರವದಿ ಎಪ್ರಿಲ್ 30ಕ್ಕೆ ಅಂತ್ಯವಾಗುತ್ತಿದೆ. ಹೀಗಾಗಿ ನೂತನ ಸೇನಾ ಮುಖ್ಯಸ್ಥರನ್ನು ನೇಮಕ ಮಾಡಲಾಗಿದೆ.
ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಅತ್ಯುನ್ನತ ರ್ಯಾಂಕ್ನೊಂದಿಗೆ ತೇರ್ಗಡೆಯಾದ ಮನೋಜ್ ಪಾಂಡೆ 1982ರಲ್ಲಿ ಕಾರ್ಪ್ಸ್ ಎಂಜಿನೀಯರ್ ಆಗಿ 1982ರಲ್ಲಿ ಸೇವೆ ಆರಂಭಿಸಿದರು.
ಭಾರತೀಯ ಸೇನೆಯ ಎಂಜಿನೀಯರಿಂಗ್ ರೆಜಿಮೆಂಟ್ನ ಕಮಾಂಡರ್ ಆಗಿದ್ದ ಮನೋಜ್ ಪಾಂಡೆ, ಪ್ರಮುಖ ಆಪರೇಶನ್ಗಳನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.
ಜಮ್ಮು ಕಾಶ್ಮೀರ ಲೈನ್ ಆಫ್ ಕಂಟ್ರೋಲ್ನ ಪಲ್ಲನ್ವಾಲಾ ಸೆಕ್ಟರ್ನಲ್ಲಿ ನಡೆಸಿದ ಆಪರೇಶನ್ ಪರಾಕ್ರಮ ಕಾರ್ಯಚರಣೆಯ ಎಂಜಿನೀಯರಿಂಗ್ ರಿಜಿಮೆಂಟ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ.
2001ರಲ್ಲಿ ನಡೆದ ಸಂಸತ್ ದಾಳಿಯಲ್ಲಿ ಉಗ್ರರ ಸದಬಡಿಯುವ ಹಾಗೂ ಸಂಪೂರ್ಣ ಆಪರೇಶನ್ ಎಂಜಿನೀಯರಿಂಗ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಭಾರತೀಯ ಸೇನೆಯಲ್ಲಿ 39 ವರ್ಷಗಳ ಸೇವಾ ಅನುಭವ ಇದೀಗ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಿಸಿದೆ.