ಭೋಪಾಲ್ : ತನ್ನ 13 ವರ್ಷದ ಮಗಳ ಮೇಲೆ ಪದೇ ಪದೇ ಅತ್ಯಾಚಾರ ಎಸಗುತ್ತಿದ್ದ ವ್ಯಕ್ತಿಯೊಬ್ಬನಿಗೆ ಮಧ್ಯಪ್ರದೇಶದ ಇಂದೋರ್ ನ್ಯಾಯಾಲಯ ಜೀವಾವಧಿ ಶಿಕ್ಷೆಯೊಂದಿಗೆ 6 ಸಾವಿರ ರೂ. ದಂಡ ವಿಧಿಸಿದೆ.
ಸಂತ್ರಸ್ತ ಬಾಲಕಿಗೆ 3 ಲಕ್ಷ ರೂ. ಪರಿಹಾರವನ್ನು ಸರ್ಕಾರದ ಬೊಕ್ಕಸದಿಂದ ನೀಡುವಂತೆ ಶಿಫಾರಸು ಮಾಡಿದೆ. 2018ರ ಪ್ರಕರಣ ಉಲ್ಲೇಖಿಸಿ ವಿಶೇಷ ನ್ಯಾಯಾಧೀಶರಾದ ಸುರೇಖಾ ಮಿಶ್ರಾ ತೀರ್ಪು ನೀಡಿದ್ದಾರೆ.
32 ವರ್ಷದ ಆರೋಪಿ 2018ರಲ್ಲಿ ತನ್ನ ಸ್ವಂತ ಮಗಳ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದ. ಈ ವಿಚಾರವನ್ನು ಯಾರಿಗಾದ್ರೂ ಹೇಳಿದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಈ ಪ್ರಕರಣ ಬೆಳಕಿಗೆ ಬಂದ ನಂತರ ಕೇಸ್ ದಾಖಲಿಸಿ ಪೊಲೀಸರು ಕಾಮುಕ ತಂದೆಯನ್ನು ಬಂಧಿಸಿದ್ದರು. ಈ ಕುರಿತು ಶನಿವಾರ ನಡೆದ ವಿಚಾರಣೆ ಬಳಿಕ ಆರೋಪಿಯನ್ನು ದೋಷಿ ಎಂದು ಗುರುತಿಸಿ, ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.