ಅಪ್ರಾಪ್ತೆಯ ಮೇಲೆ 16 ಮಂದಿಯಿಂದ ಗ್ಯಾಂಗ್ ರೇಪ್
ಫೆಬ್ರವರಿ 11 ರಂದು ಘಟನೆ ನಡೆದಿದೆ. ಮೇಕೆ ಮೇಯಿಸಲು ಬಾಲಕಿ ಹೋಗಿದ್ದಾಗ ಐವರು ಆಕೆಯನ್ನು ಅಪಹರಿಸಿದ್ದಾರೆ. ಬಳಿಕ 16 ಮಂದಿ ಆಕೆಯ ಮೇಲೆರಗಿದ್ದಾರೆ. ಅವರ ಹಿಡಿತದಿಂದ ತಪ್ಪಿಸಿಕೊಂಡು ಬಾಲಕಿ ಮನೆಗೆ ಬಂದಿದ್ದಾಳೆ.
ಈ ಬಗ್ಗೆ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. 16 ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.