16 ರ ಬಾಲಕನನ್ನುಒಂದು ವರ್ಷ ಅತ್ಯಾಚಾರ ಮಾಡಿದ ಯುವಕರ ಗುಂಪು!
ಗುರುವಾರ, 3 ಆಗಸ್ಟ್ 2017 (11:05 IST)
ಮುಂಬೈ: ಇದು ನಿಜಕ್ಕೂ ಸಮಾಜವೇ ಬೆಚ್ಚಿಬೀಳುವ ಘಟನೆ. 16 ವರ್ಷದ ಬಾಲಕನೋರ್ವ 15 ಮಂದಿ ತನ್ನನ್ನು ಒಂದು ವರ್ಷ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡರು ಎಂದು ಆರೋಪಿಸಿದ್ದಾನೆ.
15 ಮಂದಿ ಯುವಕರು ತನ್ನನ್ನು ಬೆದರಿಸಿ, ಲೈಂಗಿಕವಾಗಿ ಬಳಸಿಕೊಂಡರು ಎಂದು ಆತ ಪೊಲೀಸರಿಗೆ ದೂರು ನೀಡಿದ್ದಾನೆ. ಯಾರಿಗೂ ಹೇಳದಂತೆ ಕಾಮುಕರು ಲೈಂಗಿಕ ಕಿರುಕುಳದ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದರು. ಆದರೆ ನೋವು ತಡೆಯಲಾಗದೆ ಬಾಲಕ ತನ್ನ ಸ್ನೇಹಿತನ ಬಳಿ ಹೇಳಿಕೊಂಡಿದ್ದಾನೆ.
ಇದಾದ ಮೇಲೆ ಪೊಲೀಸರಿಗೆ ದೂರು ನೀಡಲಾಗಿದೆ. ಬಾಲಕನ ವೈದ್ಯಕೀಯ ಪರೀಕ್ಷೆ ನಡೆಸಿದ ಪೊಲೀಸರು ಲೈಂಗಿಕ ಕಿರುಕುಳವಾಗಿದ್ದು ನಿಜ ಎಂದು ಪತ್ತೆ ಮಾಡಿದ್ದಾರೆ. ಈ ಸಂಬಂಧ 15 ರಿಂದ 17 ವರ್ಷದೊಳಗಿನ ಯುವಕರನ್ನು ಬಂಧಿಸಲಾಗಿದೆ.