1993ರ ಮುಂಬೈ ಸರಣಿ ಸ್ಫೋಟ ಪ್ರಕರಣ: ಅಬುಸಲೇಂ ಸೇರಿ ಐವರು ಅಪರಾಧಿಗಳೆಂದು ತೀರ್ಪು
ಶುಕ್ರವಾರ, 16 ಜೂನ್ 2017 (13:23 IST)
ಮುಂಬೈ: 1993ರ ಮುಂಬೈ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಅಬು ಸಲೇಂ, ಮುಸ್ತಫಾ ದೋಸಾ, ಕರೀಮುಲ್ಲಾ, ತಾಹೀರ್ ಮರ್ಚಂಟ್ ಮತ್ತು ಫಿರೋಜ್ ಅಬ್ದುಲ್ ರಶೀದ್ ಖಾನ್ ಸೇರಿದಂತೆ 5 ಜನರನ್ನು ಅಪರಾಧಿಗಳೆಂದು ಟಾಡಾ ನ್ಯಾಯಾಲಯ ತೀರ್ಪು ನೀಡಿದೆ.
1993ರ ಮುಂಬೈ ಸರಣಿ ಸ್ಫೋಟದಲ್ಲಿ 257 ಮಂದಿ ಸಾವನ್ನಪ್ಪಿ, 700 ಮಂದಿ ಗಾಯಗೊಂಡಿದ್ದರು. 27 ಕೋಟಿಗೂ ಹೆಚ್ಚು ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟವಾಗಿತ್ತು. 24 ವರ್ಷಗಳ ನಂತರ ಟಾಡಾ ನ್ಯಾಯಾಲಯ ತೀರ್ಪು ನೀಡಿದೆ.