ಜಗತ್ತಿನ ಶ್ರೀಮಂತ ದೇವರು ತಿರುಪತಿ ತಿಮ್ಮಪ್ಪನ 2,780 ಕೆ.ಜಿ ಬಂಗಾರದ ಒಡವೆಗಳನ್ನ ಎಸ್`ಬಿಐ ಬ್ಯಾಂಕಿನಲ್ಲಿ ದೀರ್ಘಕಾಲಿಕ ಠೇವಣಿ ಇಡಲಾಗಿದೆ.
ಅಮರಾವತಿ ಸರ್ಕಲ್`ನ ಎಸ್`ಬಿಎಂ ಬ್ಯಾಂಕ್`ಶಾಖೆಯಲ್ಲಿ ಒಡವೆಗಳನ್ನ ಠೇವಣಿ ಇಡಲಾಗಿದ್ದು, ದೀರ್ಘಕಾಲಿಕ ಠೇವಣಿ ಆಗಿರುವುದರಿಂದ ಟಿಟಿಡಿಗೆ 2.5ರಷ್ಟು ಬಡ್ಡಿ ಸಿಗಲಿದೆ. ಠೇವಣಿಗೆ ಸಂಬಂಧಿಸಿದ ಕಾಗದ ಪತ್ರಗಳನ್ನ ಎಸ್`ಬಿಐ ಚೀಫ್ ಜನರಲ್ ಮ್ಯಾನೇಜರ್ ಮಣಿ ಪಲ್ವೇಸನ್ ಟಿಟಿಡಿಯ ಮುಖ್ಯ ಹಣಕಾಸು ಸಲಹೆಗಾರ ಮತ್ತು ಮುಖ್ಯ ಲೆಕ್ಕಾಧಿಕಾರಿ ಓ. ಬಾಲಾಜಿಗೆ ಹಸ್ತಾಂತರಿಸಿದ್ದಾರೆ.
.
12 ವರ್ಷಗಳ ಸುದೀರ್ಘ ಠೇವಣಿ ಇಡಲಾಗಿದೆ. ಹಲವು ದಿನಗಳಿಂದ ತಿರುಪತಿ ತಿಮ್ಮಪ್ಪನ ಬಂಗಾರದ ಒಡವೆಗಳು ಬ್ಯಾಂಕ್`ನಲ್ಲಿ ಠೇವಣಿ ಇಡುವ ಬಗ್ಗೆ ವರದಿಗಳು ಕೇಳಿಬಂದಿದ್ದವು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ