ವಾರಣಾಸಿ ದಾಳಿ ಪ್ರಕರಣದಲ್ಲಿ ಉಗ್ರನಿಗೆ ಗಲ್ಲು ಶಿಕ್ಷೆ ಪ್ರಕಟ!
ವಾರಣಾಸಿಯ ಬಾಂಬ್ ಸ್ಫೋಟ ಪ್ರಕರಣದಲ್ಲಿ ಉಗ್ರ ವಲಿ ಉಲ್ಲಾಹ್ ಗೆ ಮರಣದಂಡನೆ ಶಿಕ್ಷೆ ವಿಧಿಸಿ ಗುಜರಾತ್ ನ ಗಾಜಿಯಾಬಾದ್ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
2006, ಮಾರ್ಚ್ 7ರಂದು ವಾರಣಾಸಿಯ ದೇವಸ್ಥಾನ ಮತ್ತು ಕಂಟೋನ್ಮೆಂಟ್ ಗಳಲ್ಲಿ ನಡೆದ ದಾಳಿ ಪ್ರಕರಣದಲ್ಲಿ 20 ಮಂದಿ ಮೃತಪಟ್ಟು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಸ್ಫೋಟ ಪ್ರಕರಣದ ಪ್ರಮುಖ ರೂವಾರಿಯಾಗಿದ್ದ ಗಾಜಿ ವಲ್ಲಾಹ್ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ನ್ಯಾಯಾಲಯ ದೋಷಿ ಎಂದು ಪ್ರಕಟಿಸಿದ್ದು, ಇಂದು ಮರಣದಂಡನೆ ವಿಧಿಸಿ ಆದೇಶ ಹೊರಡಿಸಿದೆ.