23 ಮಂದಿ ಕಾಮುಕರಿಂದ ಒಂಟಿ ಮಹಿಳೆ ಮೇಲೆ ಅತ್ಯಾಚಾರ

ಶುಕ್ರವಾರ, 29 ಸೆಪ್ಟಂಬರ್ 2017 (11:17 IST)
ಜೈಪುರ: ರಾಜಸ್ತಾನದ ಬಿಕನೆರ್ ಜಿಲ್ಲೆಯಲ್ಲಿ ದೆಹಲಿ ಮೂಲದ ಮಹಿಳೆಯೊಬ್ಬರನ್ನು 23 ಮಂದಿ ದುರುಳರು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ನಡೆದಿದೆ.

 
ದೆಹಲಿ ಮೂಲದ ಮಹಿಳೆಗೆ ಬಿಕನೆರ್ ನಲ್ಲಿ ನಿವೇಶನವಿದೆ. ಈ ನಿವೇಶನ ಪರಿಶೀಲಿಸಲು ಮಹಿಳೆ ಬಂದಿದ್ದಾಗ ದುರುಳರು ಈ ಕೃತ್ಯವೆಸಗಿದ್ದಾರೆ. ಇಬ್ಬರು ಆರೋಪಿಗಳು ಅಕೆಯನ್ನು ಬಲವಂತವಾಗಿ ಕಾರಿನೊಳಕ್ಕೆ ತಳ್ಳಿ ನಿರಂತರ ಅತ್ಯಾಚಾರವೆಸಗಿದ್ದಾರೆ.

ಇದಾದ ಬಳಿಕ ಆ ವ್ಯಕ್ತಿಗಳೊಂದಿಗೆ ಹಲವು ಮಂದಿ ಲೈಂಗಿಕವಾಗಿ ತನ್ನನ್ನು ಬಳಸಿಕೊಂಡರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ. ನಂತರ ಆಕೆಯನ್ನು ಇನ್ನೊಂದು ಗ್ರಾಮಕ್ಕೆ ಎಳೆದೊಯ್ದ ಆರೋಪಿಗಳು ಮತ್ತಷ್ಟು ಮಂದಿಯಿಂದ ಅತ್ಯಾಚಾರ ಮಾಡಿಸಿದ್ದಾರೆ. ಕೃತ್ಯವೆಸಗಿದ ಬಳಿಕ ಸಂತ್ರಸ್ತೆಯನ್ನು ಆಕೆಯ ನಿವೇಶನದ ಬಳಿಯೇ ಬಿಟ್ಟು ಪರಾರಿಯಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ