ಮನಾಲಿಯಲ್ಲಿ 25 ವರ್ಷದ ಇಸ್ರೇಲ್ ಯುವತಿಯ ಮೇಲೆ ಗ್ಯಾಂಗ್‌ರೇಪ್

ಸೋಮವಾರ, 25 ಜುಲೈ 2016 (15:37 IST)
ಇಸ್ರೇಲ್ ದೇಶದ 25 ವರ್ಷ ವಯಸ್ಸಿನ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾದ ಇಬ್ಬರ ಯುವಕರ ಪತ್ತೆಗೆ ಹಿಮಾಚಲ ಪ್ರದೇಶದ ಪೊಲೀಸರು ಭಾರಿ ಹುಡುಕಾಟ ನಡೆಸಿದ್ದಾರೆ.
 
ಹಿಮಾಚಲ ಪ್ರದೇಶದ ರಾಜಧಾನಿಯಿಂದ 250 ಕಿ.ಮೀ. ದೂರದಲ್ಲಿರುವ ಮನಾಲಿಗೆ ಇಸ್ರೇಲ್ ದೇಶದ ಯುವತಿ ಆಗಮಿಸಿದಾಗ ಇಬ್ಬರು ಯುವಕರು ಲಿಫ್ಟಿ ಕೊಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಅತ್ಯಾಚಾರಕ್ಕೊಳಗಾದ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ಮತ್ತಷ್ಟು ಪರೀಕ್ಷೆಗಳನ್ನು ನಡೆಸುವಂತೆ ಯುವತಿ ಕೋರಿದ್ದರಿಂದ ಸುಂದರನಗರ್ ಪಟ್ಟಣಕ್ಕೆ ಕರೆದುಕೊಂಡು ಹೋಗಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ತನ್ನ ಗೆಳೆಯರು ತನ್ನನ್ನು ಏಕಾಂಗಿಯಾಗಿ ಬಿಟ್ಟು ಕಾಜಾ ಪ್ರದೇಶಕ್ಕೆ ತೆರಳಿದ್ದಾರೆ ಎಂದು ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
 
ಕಳೆದ 2013ರಲ್ಲಿ ಅಮೆರಿಕದ ಯುವತಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ನಂತರ ಇದೀಗ ಇಸ್ರೇಲ್ ಯುವತಿಯ ಮೇಲೆ ನಡೆದಿರುವುದು ಎರಡನೇ ಅತ್ಯಾಚಾರ ಘಟನೆಯಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ