ಉತ್ತರಪ್ರದೇಶ: ಹತ್ರಾಸ್‌ನಲ್ಲಿ ನಡೆದ ಶಿವನ ಧಾರ್ಮಿಕ ಕಾರ್ಯಕ್ರಮ ಮುಗಿಯುತ್ತಿದ್ದ ಹಾಗೇ ಕಾಲ್ತುಳಿತ ಸಂಭವಿಸಿ ಮಹಿಳೆಯರು ಮತ್ತು ಮಕ್ಕಳು ಸೇರಿ 27 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಇನ್ನೂ ಕಾಲ್ತುಳಿತದಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ.
ಮುಖ್ಯ ವೈದ್ಯಾಧಿಕಾರಿ ರಾಜಕುಮಾರ್ ಅಗರ್ವಾಲ್ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಮಂಗಳವಾರ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಕಾಲ್ತುಳಿತ ಸಂಭವಿಸಿದ್ದು, ಮೂವರು ಮಕ್ಕಳು ಸೇರಿದಂತೆ 27 ಜನರು ಸಾವನ್ನಪ್ಪಿಸಿದೆ ಎಂದು ಹೇಳಿದರು.
ಘಟನೆ ಕುರಿತು ಮಾತನಾಡಿದ ಇಟಾಹ್ ಎಸ್‌ಎಸ್‌ಪಿ ರಾಜೇಶ್ ಕುಮಾರ್ ಸಿಂಗ್, "ಹತ್ರಾಸ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದಾಗ ಕಾಲ್ತುಳಿತ ಸಂಭವಿಸಿದೆ. ಇಟಾಹ್ ಆಸ್ಪತ್ರೆಯಲ್ಲಿ 23 ಮಹಿಳೆಯರು, 3 ಮಕ್ಕಳು ಸೇರಿದಂತೆ 27 ಮೃತ ದೇಹಗಳನ್ನು ಸ್ವೀಕರಿಸಲಾಗಿದೆ. ಮತ್ತು 1 ವ್ಯಕ್ತಿ ಗಾಯಗೊಂಡವರು ಆಸ್ಪತ್ರೆಯನ್ನು ತಲುಪಿಲ್ಲ... ಈ 27 ಮೃತದೇಹಗಳ ಗುರುತು ಪತ್ತೆ ಮಾಡಲಾಗುತ್ತಿದೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ, ಜನದಟ್ಟಣೆಯಿಂದಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಸಿಕಂದರ ರಾವ್ ಪೊಲೀಸ್ ಠಾಣೆ ಎಸ್‌ಎಚ್‌ಒ ಆಶಿಶ್ ಕುಮಾರ್ ತಿಳಿಸಿದ್ದಾರೆ.
ಇನ್ನೂ ಹೆಚ್ಚು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.