ದೇಶದ ಈ 29 ನಗರಗಳಲ್ಲಿ ಯಾವಾಗ ಬೇಕಾದರೂ ಭೂಕಂಪವಾಗಬಹುದು..!

ಸೋಮವಾರ, 31 ಜುಲೈ 2017 (09:53 IST)
ದೆಹಲಿ ಮತ್ತು 9 ರಾಜ್ಯಗಳ ರಾಜಧಾನಿಗಳು ಸೇರಿ ದೇಶದ 29 ನಗರಗಳು ಮತ್ತು ಪಟ್ಟಣಗಳು ತೀವ್ರ ಮತ್ತು ಅತೀ ತೀವ್ರ ಭೂಕಂಪ ವಲಯಗಳ ಸಾಲಿಗೆ ಸೇರಿವೆ ಎಂದು ಸೈಸ್ಮಾಲಜಿ ನ್ಯಾಷನಲ್ ಸೆಂಟರ್ (NCS) ಹೇಳಿದೆ.
 

ಇವುಗಳಲ್ಲಿ ಬಹುತೇಕ ನಗರಗಳು ಹಿಮಾಲಯದ ತಪ್ಪಲಿನಲ್ಲಿರುವುದು ವಿಶೇಷ. ಹಿಮಾಲಯ ತಪ್ಪಲು ವಿಶ್ವದ ಅತ್ಯಂತ ಅಪಾಯಕಾರಿ ಭೂಕಂಪ ವಲಯವಾಗಿದೆ ಎಂದು ಎನ್`ಸಿಎಸ್ ಹೇಳಿದೆ.ದೆಹಲಿ, ಪಾಟ್ನಾ (ಬಿಹಾರ), ಶ್ರೀನಗರ (ಜಮ್ಮು ಮತ್ತು ಕಾಶ್ಮೀರ), ಕೊಹಿಮಾ (ನಾಗಾಲ್ಯಾಂಡ್), ಪುದುಚೇರಿ, ಗೌಹಾತಿ (ಅಸ್ಸಾಂ), ಗ್ಯಾಂಗ್ಟಾಕ್ (ಸಿಕ್ಕಿಂನ), ಶಿಮ್ಲಾ (ಹಿಮಾಚಲ ಪ್ರದೇಶ), ದೆಹ್ರಾದೂನ್ (ಉತ್ತರಾಖಂಡ್) ಇಂಫಾಲ್ (ಮಣಿಪುರ) ಮತ್ತು ಚಂಡೀಘಢ ನಗರಗಳು ತೀವ್ರ ಮತ್ತು ಅತೀ ತೀವ್ರ ಭೂಕಂಪ ವಲಯದ ಸಾಲಿನಲ್ಲಿ ಬರುತ್ತಿವೆ.


ಭೂಮಿ ಒಳಗಿನ ರಾಸಾಯನಿಕ ಚಟುವಟಿಕೆ ಆಧಾರದ ಮೇಲೆ ದಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ವತಿಯಿಂದ ಈ ಗ್ರೇಡ್ ನೀಡಲಾಗುತ್ತದೆ ಎಂದು ಎನ್`ಸಿಎಸ್ ನಿರ್ದೇಶಕ ವಿನೀತ್ ಗೌಹ್ಲಾಟ್ ತಿಳಿಸಿದ್ದಾರೆ.


ಸಂಪೂರ್ಣ ಈಶಾನ್ಯ ಭಾರತ, ಜಮ್ಮು ಮತ್ತು ಕಾಶ್ಮೀರದ ಭಾಗಗಳು, ಹಿಮಾಚಲಪ್ರದೇಶ, ಉತ್ತರಾಖಂಡ್, ಗುಕರಾತ್`ನ ಕಛ್, ಉತ್ತರ ಬಿಹಾರ,ಅಂಡಮಾನ್ ನಿಕೋಬರ್ ದ್ವೀಪಗಳು ತೀವ್ರ ಚಟುವಟಿಕೆಯ ಭೂಕಂಪನ ವಲಯದಲ್ಲಿದ್ದರೆ. ಜಮ್ಮುವಿನ ಕೆಲಭಾಗಗಳು, ದೆಹಲಿ, ಸಿಕ್ಕಿಂ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಮಹಾರಾಷ್ಟ್ರದ ಸ್ವಲ್ಪ ಭಾಗ ಅತಿ ತೀವ್ರ ಭೂಕಂಪ ವಲಯಗಳ ಸಾಲಿಗೆ ಸೇರಿವೆ. 31 ಹೊಸ ನಗರಗಳ ಭುಕಂಪನ ಮಾಪನದ ವರದಿ ಮಾರ್ಚ್`ಗೆ ಲಭ್ಯವಾಗಲಿದೆ ಎಂದು ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರಾಜೀವನ್ ಹೇಳಿದ್ದಾರೆ. ಆದರೆ, ಈ ಪಟ್ಟಿಯಲ್ಲಿ ಬೆಂಗಳೂರು ಸೇರಿದಂತೆ ದಕ್ಷಿಣದ ಯಾವುದೇ ನಗರಗಳ ಹೆಸರಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ