ದೆಹಲಿ ವಿಧಾನಸಭೆ ಸೋತಿರುವ ಅರವಿಂದ್‌ ಕೇಜ್ರಿವಾಲ್‌ಗೆ ಮತ್ತೇ ಭಾರೀ ದೊಡ್ಡ ಹೊಡೆತ

Sampriya

ಶನಿವಾರ, 15 ಫೆಬ್ರವರಿ 2025 (18:32 IST)
Photo Courtesy X
ನವದೆಹಲಿ: ಮೂರು ಆಮ್ ಆದ್ಮಿ ಪಕ್ಷದ (ಎಎಪಿ) ಕೌನ್ಸಿಲರ್‌ಗಳು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾಗುವ ಮೂಲಕ  ಅರವಿಂದ್ ಕೇಜ್ರಿವಾಲ್‌ಗೆ ಮತ್ತೇ ಭಾರೀ ಹಿನ್ನೆಡೆಯಾಗಿದೆ.

ಈ ಮೂಲಕ ಮುಂಬರುವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಮೇಯರ್ ಚುನಾವಣೆಯಲ್ಲಿ ಕೇಸರಿ ಪಕ್ಷದ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಿದೆ.

ಈ ಬಗ್ಗೆ ಮಾತನಾಡಿದ ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ  ಅವರು, 'ವಿಕ್ಷಿತ್ ಭಾರತ್' ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನದ ರಾಜಧಾನಿಯಾಗಿ ಅಭಿವೃದ್ಧಿಪಡಿಸಲು ಸರಿಯಾದ ಸಮಯದಲ್ಲಿ ದೆಹಲಿಯು ಕೇಂದ್ರ, ವಿಧಾನಸಭೆ ಮತ್ತು ಪುರಸಭೆ ಮಟ್ಟದಲ್ಲಿ "ಟ್ರಿಪಲ್ ಇಂಜಿನ್" ಸರ್ಕಾರವನ್ನು ಹೊಂದಿರುತ್ತದೆ" ಎಂದರು.

ಅನಿತಾ ಬಸೋಯಾ (ಆಂಡ್ರ್ಯೂಸ್ ಗಂಜ್), ನಿಖಿಲ್ ಚಪ್ರಾನಾ (ಹರಿ ನಗರ) ಮತ್ತು ಧರಂವೀರ್ (ಆರ್‌ಕೆ ಪುರಂ) ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರಿ ಗೆಲುವು ಸಾಧಿಸಿದ ಕೆಲವೇ ದಿನಗಳಲ್ಲಿ ಪಕ್ಷವನ್ನು ಬದಲಾಯಿಸಿದ ಮೂವರು ಎಎಪಿ ಕೌನ್ಸಿಲರ್‌ಗಳು.

ದೆಹಲಿಯನ್ನು ಸ್ವಚ್ಛ ಮತ್ತು ಸುಂದರ ನಗರವನ್ನಾಗಿ ಮಾಡಲು ಕೌನ್ಸಿಲರ್‌ಗಳು ಬಿಜೆಪಿಗೆ ಸೇರ್ಪಡೆಯಾದರು ಎಂದು ಸಚ್‌ದೇವ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ