ಹಲವು ಮಕ್ಕಳ ಕಣ್ಣಿಗೆ ಗಾಯ ಬೆನ್ನಲ್ಲೇ 59 ಕಾರ್ಬೈಡ್ ಗನ್ ವಶಕ್ಕೆ, ಇಬ್ಬರು ಅರೆಸ್ಟ್‌

Sampriya

ಶುಕ್ರವಾರ, 24 ಅಕ್ಟೋಬರ್ 2025 (19:50 IST)
Photo Credit X
ಭೋಪಾಲ್ (ಮಧ್ಯಪ್ರದೇಶ): ಆಟವಾಡುವಾಗ ಹಲವಾರು ಮಕ್ಕಳಿಗೆ ಗಾಯವಾದ ವರದಿ ಬೆನ್ನಲ್ಲೇ ಭೋಪಾಲ್ ಪೊಲೀಸರು ಶುಕ್ರವಾರ ಸುಮಾರು 59 ಕಾರ್ಬೈಡ್ ಗನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಇಬ್ಬರು ಶಂಕಿತರನ್ನು ಅರೆಸ್ಟ್ ಮಾಡಿದ್ದಾರೆ. 

ಭೋಪಾಲ್‌ನ ಉಪ ಪೊಲೀಸ್ ಆಯುಕ್ತ (ಡಿಸಿಪಿ, ವಲಯ 2) ವಿವೇಕ್ ಸಿಂಗ್ ಈ ಸಂಬಂಧ ಪ್ರತಿಕ್ರಿಯಿಸಿ, ಶಂಕಿತರು ಮನೆಯಲ್ಲಿ ಅಪಾಯಕಾರಿ ಬಂದೂಕುಗಳನ್ನು ತಯಾರಿಸುತ್ತಿದ್ದರು ಮತ್ತು ಪೊಲೀಸರು ಪೈಪ್‌ಗಳು ಮತ್ತು ಕಾರ್ಬೈಡ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದರು.

ಸ್ಫೋಟಕ ಕಾಯ್ದೆಯಡಿ ಮತ್ತು ಬಿಎನ್‌ಎಸ್‌ನ ಸೆಕ್ಷನ್ 288 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

ಮಾನವ ಜೀವಕ್ಕೆ ಅಪಾಯ, ನಾವು ಎಲ್ಲರಿಗೂ ಎಚ್ಚರಿಕೆ ನೀಡಿದ್ದೇವೆ. ನಾವು ಸುಮಾರು 59 ಕಾರ್ಬೈಡ್ ಗನ್‌ಗಳನ್ನು ವಶಪಡಿಸಿಕೊಂಡಿದ್ದೇವೆ ಮತ್ತು ಇಬ್ಬರು ಶಂಕಿತರನ್ನು ಬಂಧಿಸಿದ್ದೇವೆ.

ವಿಚಾರಣೆಯ ಸಮಯದಲ್ಲಿ, ಅವರು ಮನೆಯಲ್ಲಿ ಕಾರ್ಬೈಡ್ ಗನ್‌ಗಳನ್ನು ತಯಾರಿಸುತ್ತಿದ್ದಾರೆಂದು ನಾವು ಪತ್ತೆಹಚ್ಚಿದ್ದೇವೆ ಮತ್ತು ಅವರಿಂದ ಕಾರ್ಬೈಡ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಪ್ರಸ್ತುತ ಆರು ಮಕ್ಕಳು ಕಾರ್ಬೈಡ್ ಗನ್‌ಗಳೊಂದಿಗೆ ಆಟವಾಡಿ ಕಣ್ಣಿಗೆ ಗಂಭೀರ ಗಾಯಗಳೊಂದಿಗೆ ಭೋಪಾಲ್‌ನ ಹಮಿಡಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದು, 27 ಮಂದಿ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿದ್ದಾರೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ