ಹೌದು, ಬಸಂತಪುರ ಪ್ರಾಥಮಿಕ ಶಾಲೆಯ ಶೌಚಾಲಯದಲ್ಲಿ ಆರು ವರ್ಷದ ಬಾಲಕಿಯ ದೇಹವೊಂದು ಪತ್ತೆಯಾಗಿದ್ದು, ಈಕೆ ಬಸಂತಪುರ್ಗೆ ಮೂರು ದಿನದ ಕೆಳಗೆ ಸಂಬಂಧಿಕರ ಕಾರ್ಯಕ್ರಮಕ್ಕೆ ಅವರ ಅಜ್ಜನ ಜೊತೆ ಬಂದಿದ್ದಳು. ಆಗ ಕೆಲ ಕಿಡಿಗೇಡಿಗಳು ಬಾಲಕಿಯನ್ನು ಕಿಡ್ನಾಪ್ ಮಾಡಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆಕೆಯನ್ನು ಕೊಲೆ ಮಾಡಿ ಆ ಗ್ರಾಮದ ಪ್ರಾಥಮಿಕ ಶಾಲೆಯ ಶೌಚಾಲಯದಲ್ಲಿ ಮೃತ ದೇಹವನ್ನು ಎಸೆದು ಹೋಗಿದ್ದಾರೆ.
ಗುರುವಾರದಿಂದ ಬಾಲಕಿ ನಾಪತ್ತೆ ಆಗಿದ್ದು, ಬಾಲಕಿ ಅಜ್ಜ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.