ಮೋದಿಗೆ 6ರ ಬಾಲಕಿ ಪತ್ರ : ಆ ಪತ್ರದಲ್ಲಿ ಏನಿದೆ?

ಸೋಮವಾರ, 1 ಆಗಸ್ಟ್ 2022 (13:28 IST)
ಲಕ್ನೋ : ಬೆಲೆ ಏರಿಕೆಯಿಂದ ಕಷ್ಟ ಅನುಭವಿಸದೇ ಇರುವವರು ಯಾರಿದ್ದಾರೆ? ಪ್ರಯೊಬ್ಬರೂ ಸರ್ಕಾರದ ನಡೆಯನ್ನು ದೂಷಿಸಿದ್ದಾರೆ.
 
ಆದರೆ ಅದೇ ಸಂಕಷ್ಟ 6 ವರ್ಷದ ಬಾಲಕಿಗೂ ಎದುರಾಗಿ ಕೊನೆಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ತನ್ನ ಅಳಲು ತೋಡಿಕೊಂಡಿದ್ದಾಳೆ.

ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಛಿಬ್ರಮೌ ಪಟ್ಟಣದ ಬಾಲಕಿ ಕೃತಿ ದುಬೇ ಮೋದಿಗೆ ಪತ್ರ ಬರೆದಿದ್ದಾಳೆ. 1ನೇ ತರಗತಿಯ ಪುಟ್ಟ ಬಾಲಕಿ ಬರೆದಿರುವ ಪತ್ರ ಇದೀಗ ಸಾಮಾಜಿಕ ಮಾಧ್ಯಮಗಳಲ್ಲೂ ಹರಿದಾಡಿದೆ.

ಬಾಲಕಿ ಬರೆದ ಪತ್ರದಲ್ಲಿ, ಮೋದಿಜೀ ನೀವು ತುಂಬಾ ಬೆಲೆ ಏರಿಕೆ ಮಾಡಿದ್ದೀರಿ. ಪೆನ್ಸಿಲ್, ರಬ್ಬರ್ ಬೆಲೆ ದುಬಾರಿಯಾಗಿದೆ, ಮ್ಯಾಗಿ ಬೆಲೆಯೂ ಏರಿಕೆ ಆಗಿದೆ. ಶಾಲೆಯಲ್ಲಿ ಇತರ ಮಕ್ಕಳು ನನ್ನ ಪೆನ್ಸಿಲ್ಗಳನ್ನು ಕದಿಯುತ್ತಾರೆ. ನಾನು ಅಮ್ಮನ ಬಳಿ ಹೊಸ ಪೆನ್ಸಿಲ್ ಕೇಳಿದರೆ, ನನಗೆ ಹೊಡೆಯುತ್ತಾರೆ ಎಂದು ತನ್ನ ಕಷ್ಟವನ್ನು ಹೇಳಿಕೊಂಡಿದ್ದಾಳೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ