ತರಕಾರಿ ಬೆಲೆ ಏರಿಕೆ

ಸೋಮವಾರ, 18 ಜುಲೈ 2022 (20:59 IST)
ಅಷಾಡ ಮಾಸದ ಕಾರಣಕ್ಕೆ ಮದುವೆ ಸೇರಿದಂತೆ ಶುಭ ಸಮಾರಂಭಗಳು ಕಡಿಮೆಯಾದ ಕಾರಣ ತರಕಾರಿ ಬೆಲೆಯಲ್ಲಿ ತುಸು ಇಳಿಕೆ ಕಂಡಿದ್ದು, ಗ್ರಾಹಕರಿಗೆ ಕೊಂಚ ಸಮಾಧಾನ ತಂದಿದೆ. ರೈತರಿಗೆ ಉತ್ಪಾದನಾ ಬೆಲೆಯು ಸಿಗದಂತಾಗಿದೆ. ಬೀನ್ಸ್, ಟೊಮೆಟೋ, ಕ್ಯಾರೆಟ್ ಮತ್ತು ಹಸಿ ಮೆಣಸಿನಕಾಯಿಯ ಬೆಲೆ ಗಗನಕ್ಕೇರಿದ್ದವು. ಬೆಂಗಳೂರು ನಗರಕ್ಕೆ ಹಣ್ಣು ತರಕಾರಿ ಪೂರೈಕೆ ಮಾಡುತ್ತಿರುವ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದ್ದು, ಉತ್ತಮ ಫಸಲು ಬಂದಿದೆ.  ಇನ್ನು ತರಕಾರಿ ಬೆಲೆಯಲ್ಲಿ ಶೇ.40ರವರೆಗೂ ಇಳಿಕೆ ಕಂಡಿದೆ . ಕಳೆದ ತಿಂಗಳಲ್ಲಿ ಪ್ರತಿ ಕೇಜಿ ಬೀನ್ಸ್ಗೆ .150-180 ರವರೆಗೂ ಇತ್ತು. ಟೊಮೆಟೋ ದರ .70-80 ತಲುಪಿತ್ತು. ಆದರೆ ಇದೀಗ ಕ್ರಮವಾಗಿ .80 ಹಾಗೂ .10ಕ್ಕೆ ಇಳಿದೆ. ಎಲ್ಲಾ ತರಕಾರಿ ಬೆಲೆ ಇಳಿಕೆ ಕಂಡಿದ್ದು ಮತ್ತೆ ಯಾವಾಗ ಜಾಸ್ತಿಯಾಗಲಿದೆಯೋ ಕಾದು ನೋಡ ಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ