ಆರು ವರ್ಷದ ಮಗುವಿನ ಮೇಲೆ ಇದೆಂಥಾ ಲೈಂಗಿಕ ಕ್ರೌರ್ಯ?!
ಆರು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ 38 ವರ್ಷದ ವ್ಯಕ್ತಿ ಕಾಮತೃಷೆ ತೀರಿದ ಬಳಿಕ ಆಕೆಯನ್ನು ಕೊಂದು ತನ್ನ ಮನೆಯಲ್ಲೇ ಟ್ರಂಕ್ ಒಳಗೆ ಮೃತದೇಹ ಇಟ್ಟುಕೊಂಡಿದ್ದ ಹೇಯ ಘಟನೆ ನಡೆದಿದೆ.
ಅಂಗಡಿಗೆ ಹೋಗುತ್ತಿದ್ದ ಬಾಲಕಿಯನ್ನು ಆಮಿಷ ತೋರಿಸಿ ಮನೆಗೆ ಕರೆದೊಯ್ದ ಆರೋಪಿ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ. ಬಾಲಕಿಯ ಕುಟುಂಬಸ್ಥರು ಆಕೆ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದಾಗ ಪೊಲೀಸರು ತನಿಖೆ ನಡೆಸಿದ್ದು, ಘಟನೆ ಬೆಳಕಿಗೆ ಬಂದಿದೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.