60 ಅಂಶಗಳ ಕ್ರಿಯಾ ಯೋಜನೆ ಸಿದ್ಧ ಪಡಿಸಿದ ಕೇಂದ್ರ

ಬುಧವಾರ, 20 ಅಕ್ಟೋಬರ್ 2021 (10:39 IST)
ನವದೆಹಲಿ : ಜನನ ಪ್ರಮಾಣಪತ್ರಗಳನ್ನು ಪೌರತ್ವಕ್ಕೆ ಲಿಂಕ್ ಮಾಡುವುದರಿಂದ ಹಿಡಿದು ಉದ್ಯೋಗ, ವ್ಯಾಪಾರ ಜತೆಗೆ ‘ಕುಟುಂಬ ಡೇಟಾಬೇಸ್ ವಿನ್ಯಾಸ’ ವನ್ನು ಉತ್ತೇಜಿಸುವುದರಿಂದ ಹಿಡಿದು ವಲಯದ ಎಲ್ಲಾ ಇತರ ಕಾನೂನುಗಳನ್ನು ಒಳಗೊಂಡ ಏಕ ರೂಪ ಕಾಯ್ದೆ ಜಾರಿಗೊಳಿಸಲು ಕೇಂದ್ರವು ಸಮಗ್ರ 60 ಅಂಶಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ.

ಸೆಪ್ಟೆಂಬರ್ 18 ರಂದು ಎಲ್ಲಾ ಇಲಾಖೆ ಮತ್ತು ಸಚಿವಾಲಯಗಳ ಕಾರ್ಯದರ್ಶಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮ್ಯಾರಥಾನ್ ಸಭೆ ನಡೆಸಿದ ನಂತರ ಈ ಕ್ರಿಯಾಯೋಜನೆ ಸಿದ್ಧವಾಗಿದೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ಗೆ ಲಭಿಸಿದ ಕ್ರಿಯಾ ಯೋಜನೆಯ ದಾಖಲೆಯ ಪ್ರಕಾರ, “ಭಾರತದಲ್ಲಿ ಪೌರತ್ವಕ್ಕೆ ಯಾವುದೇ ಪುರಾವೆಗಳಿಲ್ಲ. ತಂತ್ರಜ್ಞಾನ ಮತ್ತು ಮುಖ್ಯವಾಹಿನಿಯ ಮೂಲಕ ಪೌರತ್ವವನ್ನು ಜನನ ಪ್ರಮಾಣಪತ್ರದೊಂದಿಗೆ ಲಿಂಕ್ ಮಾಡಬಹುದು ಎಂದಿದೆ.
“ಕಾರ್ಯಕಾರಿ ಸಲಹೆಗಳನ್ನು ” ಎಲ್ಲಾ ಕಾರ್ಯದರ್ಶಿಗಳಿಗೆ ಕಳುಹಿಸಲಾಗಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಸೆಪ್ಟೆಂಬರ್ 20 ರಂದು ಪ್ರಧಾನ ಮಂತ್ರಿಗಳ ನಿರ್ದೇಶನಗಳ ಮೇಲೆ “ತಕ್ಷಣದ ಕ್ರಮ” ತೆಗೆದುಕೊಳ್ಳುವಂತೆ ಮತ್ತು ಅವರ “ಸಮಯಕ್ಕೆ ಅನುಗುಣವಾದ ಅನುಷ್ಠಾನ” ವನ್ನು ಖಚಿತಪಡಿಸಿಕೊಳ್ಳಲು ಕಾರ್ಯದರ್ಶಿಗಳಿಗೆ ಪ್ರತ್ಯೇಕವಾಗಿ ಪತ್ರ ಬರೆದಿದ್ದಾರೆ.
60-ಅಂಶಗಳ ಕ್ರಮವು ನಿರ್ದಿಷ್ಟ ಸಚಿವಾಲಯಗಳು ಮತ್ತು ಇಲಾಖೆಗಳನ್ನು ಗುರಿಯಾಗಿರಿಸಿಕೊಂಡಿದೆ. ಆಡಳಿತಕ್ಕಾಗಿ ಐಟಿ ಮತ್ತು ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವುದು, ವ್ಯಾಪಾರ ವಾತಾವರಣವನ್ನು ಸುಧಾರಿಸುವುದು ಮತ್ತು ನಾಗರಿಕ ಸೇವೆಗಳನ್ನು ಉನ್ನತೀಕರಿಸುವುದು – ಈ ಮೂರು ಗುರಿಗಳನ್ನು ಇದು ಹೊಂದಿದೆ ಎಂದು ಈ ಬಗ್ಗೆ ತಿಳಿದಿರುವವರೊಬ್ಬರು ವಿಶ್ಲೇಷಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ