ಕೊವಿಡ್ 19 ಲಸಿಕೆ ಗೀತೆ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ಭಾನುವಾರ, 17 ಅಕ್ಟೋಬರ್ 2021 (11:20 IST)
ದೇಶಾದ್ಯಂತ ಕೊವಿಡ್ 19 ಲಸಿಕೆ ಅಭಿಯಾನ ಭರದಿಂದ ಸಾಗುತ್ತಿದೆ. ಹಾಗೇ ಇನ್ನೇನು ಶೀಘ್ರದಲ್ಲೇ 100 ಕೋಟಿಯ ದಾಖಲೆ ತಲುಪಲಿದೆ.ಇದೊಂದು ಮೈಲಿಗಲ್ಲು ತಲುಪಲಿರುವ ಹೊತ್ತಲ್ಲೇ ಕೊವಿಡ್ 19 ಲಸಿಕಾ ಗೀತೆಯೊಂದು ರಚನೆಗೊಂಡಿದೆ.

  ಪದ್ಮಶ್ರೀ ಪುರಸ್ಕೃತ ಗಾಯಕ ಕೈಲಾಶ್ ಖೇರ್ ಹಾಡಿರುವ ಈ ಆಡಿಯೋ, ವಿಷ್ಯುವಲ್ (ಧ್ವನಿ ಮತ್ತು ದೃಶ್ಯ) ಲಸಿಕೆ ಗೀತೆಯನ್ನು ಕೇಂದ್ರ ಸರ್ಕಾರ ಇಂದು ದೆಹಲಿಯ ಶಾಸ್ತ್ರಿ ಭವನ್ದಲ್ಲಿ ಬಿಡುಗಡೆ ಮಾಡಿದ್ದು, ಸಚಿವ ಹರ್ದೀಪ್ ಸಿಂಗ್ ಪುರಿ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ಕೊವಿಡ್ 19 ಲಸಿಕಾ ಗೀತೆ ಬಿಡುಗಡೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಮನ್ಸುಖ್ ಮಾಂಡವಿಯಾ ಮತ್ತಿತರ ಕೇಂದ್ರ ಮಟ್ಟದ ಅಧಿಕಾರಿಗಳು ಇದ್ದರು. ಈ ಹಾಡನ್ನು ತೈಲ ಮತ್ತು ಅನಿಲ ಸಾರ್ವಜನಿಕ ವಲಯದ ಸಂಸ್ಥೆಗಳು ನಿರ್ಮಾಣ ಮಾಡಿವೆ.  ಇನ್ನು ಗಾಯನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಹರ್ದೀಪ್ ಪುರಿ, ಮುಂದಿನ ವಾರ ಭಾರತ 100 ಕೋಟಿ ಕೊವಿಡ್ 19 ಲಸಿಕೆ ಗುರಿಯನ್ನು ಮುಟ್ಟಲಿದೆ. ಕೊವಿಡ್ 19 ಲಸಿಕೆ ಬಗ್ಗೆ ಋಣಾತ್ಮಕ ಅಭಿಪ್ರಾಯ ಹುಟ್ಟುಹಾಕಲು ಪ್ರಯತ್ನ ಪಟ್ಟವರು ವಿಫಲರಾಗಿದ್ದಾರೆ. ದೇಶದಲ್ಲೀಗ ಕೊವಿಡ್ 19 ಲಸಿಕೆ ಅಭಿಯಾನ ಚಳವಳಿಯಾಗಿ ಮಾರ್ಪಟ್ಟಿದ್ದು ತುಂಬ ತೃಪ್ತಿ ತಂದಿದೆ ಎಂದು ತಿಳಿಸಿದರು. ಹಾಗೇ, ಹಾಡುಗಾರರು ಜನರ ಕಲ್ಪನೆಯನ್ನು ಹಿಡಿದಿಡುವ ಶಕ್ತಿ ಹೊಂದಿರುತ್ತಾರೆ. ಈ ಹಾಡಿನ ಮೂಲಕ ಕೈಲಾಶ್ ಖೇರ್ ಕೊವಿಡ್ 19 ಲಸಿಕೆ ಬಗ್ಗೆ ಇರುವ ಮಿಥ್ಯೆಗಳನ್ನು ಹೋಗಲಾಡಿಸಿ, ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ