ಅಯೋಧ್ಯೆಗೆ ತೆರಳುತ್ತಿದ್ದ 7 ಜನರ ದುರ್ಮರಣ!
ಅಯೋಧ್ಯೆಗೆ ಬಸ್ನಲ್ಲಿ ಕರ್ನಾಟಕದ ಬೀದರ್ನ 16 ಜನರು ಸಾಗುತ್ತಿದ್ದರು. ಈ ಬಸ್ ಮೋತಿಪುರ್ ಪ್ರದೇಶದ ನಾನಿಹಾ ಮಾರುಕಟ್ಟೆಯಲ್ಲಿ ಎದುರಿನ ಲೇನ್ಗೆ ಪ್ರವೇಶಿಸಿದಾಗ ಈ ಘಟನೆ ಸಂಭವಿಸಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ತಿಳಿಸಿದ್ದಾರೆ.
ಬಸ್ ಚಾಲಕ ಸೇರಿದಂತೆ ಐವರು ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದರು. ಮೃತಪಟ್ಟವರೆಲ್ಲರೂ ಬೀದರ್ನ ಗುಂಪಾ ಹಾಗೂ ಸುಲ್ತಾನಪುರ್ ಗ್ರಾಮದದವರೆಂದು ಗುರುತಿಸಲಾಗಿದೆ. 9 ಜನರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.