70 ವಿದ್ಯಾರ್ಥಿಯರ ಬಟ್ಟೆ ಬಿಚ್ಚಿಸಿದ ವಾರ್ಡನ್

ಶುಕ್ರವಾರ, 31 ಮಾರ್ಚ್ 2017 (16:23 IST)
ಶೌಚಾಲಯದಲ್ಲಿ ರಕ್ತದ ಕಲೆ ಕಂಡು ಬಂದ ಹಿನ್ನೆಲೆಯಲ್ಲಿ ವಾರ್ಡನ್ 70 ವಿದ್ಯಾರ್ಥಿಯರ ಬಟ್ಟೆ ಬಿಚ್ಚಿಸಿ ಋತುಸ್ರಾವದ ಪರೀಕ್ಷೆ ನಡೆಸಿದ ಆಘಾತಕಾರಿ ಘಟನೆ ಉತ್ತರಪ್ರದೇಶದ ಮುಜಾಫರ್`ನಗರದ ವಸತಿ ಶಾಲೆಯಲ್ಲಿ ನಡೆದಿದೆ.  ಅಷ್ಟೇ ಅಲ್ಲ, ಕಟುಕಿ ವಾರ್ಡನ್ ವಿದ್ಯಾರ್ಥಿಯರನ್ನ ಬೆತ್ತಲಾಗಿಯೇ ತರಗತಿಯಲ್ಲಿ ಕೂರಿಸಿದ್ದಳು ಎಂದು ಆರೋಪಿಸಲಾಗಿದೆ.
 

ಕಸ್ತೂರ ಬಾ ಗಾಂಧಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಹುಡುಗಿಯರನ್ನ ವಾರ್ಡನ್ ಅವಮಾನಿದಲ್ಲದೆ ನನ್ನ ಮಾತು ಕೇಳದಿದ್ದರೆ ಮತ್ತಷ್ಟು ಚಿತ್ರಹಿಂಸೆ ಕೊಡುವುದಾಗಿ ಬೆದರಿಸಿದ್ದಾಳೆ ಎಂದು ವಿದ್ಯಾರ್ಥಿನಿಯರ ಪೋಷಕರು ನೀಡಿರುವ ದೂರಿನಲ್ಲಿ ಆರೋಪಿಸಿರುವುದಾಗಿ ಜಿಲ್ಲಾ ಶಿಕ್ಷಣಾಧಿಕಾರಿ ಚಂದ್ರಶೇಖರ್ ಯಾದವ್ ತಿಳಿಸಿದ್ದಾರೆ.

ನಮ್ಮನ್ನ ಕೆಳಮಹಡಿಗೆ ಕರೆಯಲಾಯ್ತು. ಅಲ್ಲಿ ಯಾವುದೇ ಶಿಕ್ಷಕರಿರಲಿಲ್ಲ. ವಾರ್ಡನ್ ನಮ್ಮ ಬಟ್ಟೆ ಕಳಚುವಂತೆ ಸೂಚಿಸಿದರು. ಇಲ್ಲದಿದ್ದರೆ ಹೊಡೆಯುವುದಾಗಿ ಬೆದರಿಸಿದರು. ಬೇರೆ ದಾರಿಕಾಣದೆ ಬಟ್ಟೆ ಬಿಚ್ಚಿದೆವು ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ.

ಘಟನೆ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿರುವ ಜಿಲ್ಲಾ ಶಿಕ್ಷಣಾಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

ವೆಬ್ದುನಿಯಾವನ್ನು ಓದಿ