ಟರ್ಕಿ ಮೇಲೆ ಒಂದೊಂದೆ ಪ್ರತೀಕಾರ ತೀರಿಸುತ್ತಿರುವ ಭಾರತ: ವಿಮಾನಯಾನ ಸಂಸ್ಥೆಯ ಲೈಸನ್ಸ್‌ ರದ್ದು ಮಾಡಿದ ಭಾರತ

Sampriya

ಗುರುವಾರ, 15 ಮೇ 2025 (22:31 IST)
Photo Credit X
ನವದೆಹಲಿ: ಆಪರೇಷನ್ ಸಿಂದೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನಕ್ಕೆ ಸೇನಾ ನೆರವು ಒದಗಿಸಿದ ಟರ್ಕಿ ವಿರುದ್ಧ ಭಾರತ ಒಂದೊಂದಾಗಿ ‌ಪ್ರತೀಕಾರವನ್ನು ತೀರಿಸುತ್ತಿದೆ. ಸೆಲೆಬಿ ಏವಿಯೇಷನ್‌ನ ಭದ್ರತಾ ಅನುಮತಿಯನ್ನು ಗುರುವಾರ ರದ್ದುಗೊಳಿಸಿದೆ.

ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಮತ್ತು ಸರಕು ಸಾಗಣೆ ನಿರ್ವಹಣೆ ಸೇವೆಗಳನ್ನು ಒದಗಿಸುವಲ್ಲಿ ತೊಡಗಿರುವ ಟರ್ಕಿಶ್ ಕಂಪನಿಯ ವಿರುದ್ಧ ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದೆ. ಮೇ 15 ರ ಆದೇಶದಲ್ಲಿ ತಿಳಿಸಲಾಗಿದೆ.

ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಭದ್ರತಾ ಅನುಮತಿಯನ್ನು ತತ್ ಕ್ಷಣದಿಂದ ಜಾರಿಗೆ ಮಾಡುವಂತೆ ರದ್ದುಗೊಳಿಸಿದೆ.

ಕಂಪನಿಗೆ ಈ ಹಿಂದೆ 2022 ನವೆಂಬರ್ 21 ರಂದು ಗ್ರೌಂಡ್ ಹ್ಯಾಂಡ್ಲಿಂಗ್ ಏಜೆನ್ಸಿ ವರ್ಗದ ಅಡಿಯಲ್ಲಿ ಅನುಮತಿ ನೀಡಲಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ