ಮೋದಿ ಸಂಪುಟದ ಸಾಧನೆಯ ಬಗ್ಗೆ ಕೇಳಲಾಗಿ ಹೆಚ್ಚಿನವರು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಗೃಹ ಸಚಿವ ರಾಜನಾಥ್ ಸಿಂಗ್, ರೈಲ್ವೆ ಸಚಿವ ಸುರೇಶ್ ಪ್ರಭು, ರಕ್ಷಣಾ ಸಚಿವ ಮನೋಹರ ಪರಿಕ್ಕರ್, ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ರಾಮ್ ವಿಲಾಸ್ ಪಾಸ್ವಾನ್, ಬಂಡಾರು ದತ್ತಾತ್ತೇಯ, ಜೆ.ಪಿ. ನಡ್ಡಾ, ಪರಿಸರ ಸಚಿವ ಮತ್ತು ಕೃಷಿ ಸಚಿವ ರಾಧಾ ಮೋಹನ ಸಿಂಗ್ ಅವರ ಕಾರ್ಯವೈಖರಿ ಜನರಿಗೆ ತೃಪ್ತಿ ತಂದಿಲ್ಲ.