2 ಡೋಸ್ ಪಡೆದ 87,000 ಭಾರತೀಯರಿಗೆ ಕೊರೊನಾ ಸೋಂಕು!

ಗುರುವಾರ, 19 ಆಗಸ್ಟ್ 2021 (15:43 IST)
ಭಾರತದಲ್ಲಿ ಎರಡು ಡೋಸ್ ಪಡೆದ ಸು ಮಾರು 87 ಸಾವಿರಕ್ಕೂ ಅಧಿಕ ಜನರಿಗೆ ಕೊರೊನಾ ಸೋಂಕು ಕಂಡು ಬಂದಿದೆ ಎಂದು ಕೇಂದ್ರ ಸರಕಾರದ ವರದಿಯೊಂದು ಹೇಳಿದೆ.
ಕೋವಿಡ್ ಲಸಿಕೆ ಪಡೆದ 40 ಸಾವಿರಕ್ಕೂ ಅಧಿಕ ಅಂದರೆ ಸುಮಾರು ಶೇ.46ರಷ್ಟು ಜನರಿಗೆ ಪಾಸಿಟಿವ್ ದೃಢಪಟ್ಟಿರುವುದು ಕೇರಳದಲ್ಲಿ. ಇದರಲ್ಲಿ 80 ಸಾವಿರ ಜನರಿಗೆ ಮೊದಲ ಡೋಸ್ ಪಡೆದ ನಂತರ ಸೋಂಕು ಕಂಡು ಬಂದಿದೆ ಎಂದು ಕೇಂದ್ರದ ವರದಿ ಹೇಳಿದೆ.
ಸುಮಾರು 200 ಜನರ ಮಾದರಿಗಳನ್ನು ಸಂಗ್ರಹಿಸಿ ಸಂಶೋಧನೆ ಮಾಡಲಾಗಿದ್ದು, ಇವರಿಗೆ ಯಾವುದೇ ಮಾದರಿಯ ರೂಪಾಂತರಿ ಕೊರೊನಾ ಸೋಂಕು ಕಾಣಿಸಿಕೊಂಡಿಲ್ಲ ಎಂದು ವರದಿ ಅಚ್ಚರಿ ವ್ಯಕ್ತಪಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ